Wednesday, June 3, 2026
Homeಕರಾವಳಿಮಂಗಳೂರು: ಹಿಟಾಚಿ ಖರೀದಿ‌ ನೆಪದಲ್ಲಿ ವಂಚನೆ, ದೂರು ದಾಖಲು

ಮಂಗಳೂರು: ಹಿಟಾಚಿ ಖರೀದಿ‌ ನೆಪದಲ್ಲಿ ವಂಚನೆ, ದೂರು ದಾಖಲು

- Advertisement -
- Advertisement -

ಮಂಗಳೂರು: ಹಿಟಾಚಿ ಖರೀದಿ‌ ನೆಪದಲ್ಲಿ 10 ಲಕ್ಷ‌ ರೂಪಾಯಿ‌ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಕೆಎಂ ಎಂಟರ್‌ಪ್ರೈಸಸ್‌ ಸಂಸ್ಥೆಯ ಮಾಲೀಕ ಎಂ. ಕುಮಾರೇಶ್‌ ವಂಚನೆಗೊಳಗಾದವರು.

ಕುಮಾರೇಶ್  ತನ್ನ ಕೆಲಸಗಾರ ಕಿಶೋರ್‌ ಕುಮಾರ್‌ ಮುಖಾಂತರ ಮಹಾರಾಷ್ಟ್ರದ ಅಮರಾವತಿಯಲ್ಲಿನ ಅಮೋಲ್‌ ಸರ್ಜೆರಾವ್‌ ಉರ್ಕುಡೆ ಅವರ ಬಳಿ ಇದ್ದ ಹಿಟಾಚಿ ಯಂತ್ರವನ್ನು ಮಾರಾಟ ಮಾಡುವ ವಿಚಾರ ತಿಳಿದರು.

ಕಿಶೋರ್‌ ಅವರನ್ನು ಯಂತ್ರ ಖರೀದಿಗಾಗಿ ಅಲ್ಲಿಗೆ ಕಳುಹಿಸಿ ಯಂತ್ರ ನೋಡಿದ ಬಳಿಕ 13 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದರು. ಮುಂಗಡ 10 ಲ.ರೂ. ಮೊತ್ತವನ್ನು ಅಮೋಲ್‌ಗೆ ವರ್ಗಾಯಿಸಿದ್ದಾರೆ.

ಅದೇ ದಿನ ಕಿಶೋರ್‌ ಅಮರಾವತಿಗೆ ಹೋಗಿ ಅಮೋಲ್‌ನನ್ನು ಸಂಪರ್ಕಿ ಸಲು ಯತ್ನಿಸಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಮಂಗಳೂರು ಉತ್ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!