Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಸೌದಿ ಅರೇಬಿಯಾದ ರಿಯಾದ್ ನಲ್ಲಿ ಭೀಕರ ರಸ್ತೆ ಅಪಘಾತ; ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು...

ಮಂಗಳೂರು: ಸೌದಿ ಅರೇಬಿಯಾದ ರಿಯಾದ್ ನಲ್ಲಿ ಭೀಕರ ರಸ್ತೆ ಅಪಘಾತ; ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಸಾವು

- Advertisement -
- Advertisement -

ಮಂಗಳೂರು: ಸೌದಿ ಅರೇಬಿಯಾದ ರಿಯಾದ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಸೌದಿ ಅರೇಬಿಯಾದ ರಿಯಾದ್ ನ ಹೊರವಲಯದ ಝುಲ್ಫಾ ಎಂಬಲ್ಲಿ ಅಪಘಾತ ನಡೆದಿದ್ದು,ಹಳೆಯಂಗಡಿ ತೋಕೂರು ನಿವಾಸಿ ಶಮೀಮ್ ಮತ್ತು ಝರೀನಾ ದಂಪತಿ ಪುತ್ರಿ ಹಿಬಾ(29) ಆಕೆಯ ಪತಿ ಮುಹಮ್ಮದ್ ರಮೀಝ್ ( 34) ಮಕ್ಕಳಾದ ಆರೂಶ್ (3) ಮತ್ತು ರಾಹ( 3 ತಿಂಗಳು) ಮೃತಪಟ್ಟರು.

ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್ ಮಗಳು ಫಾತಿಮಾ ( 19) ಗಂಭೀರ ಗಾಯಗೊಂಡಿದ್ದಾರೆ. ಇನ್ನೋರ್ವ ಸಹೋದರಿ ಲುಬ್ನಾ ಅವರ ಮಗ ಈಸ (4) ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿಬಾ ಅವರ ತಂದೆ ಶಮೀಮ್ ಮತ್ತು ತಾಯಿ ಝರೀನಾ ಮತ್ತು ಮೊಮ್ಮಕ್ಕಳು ಇನ್ನೊಂದು ಕಾರಿನಲ್ಲಿದ್ದರು. ಮಂಗಳವಾರ ಉಮ್ರಾ ಯಾತ್ರೆ ಅರಂಭಿಸಿದ್ದರು. ಮಂಗಳವಾರ ರಾತ್ರಿ ರಿಯಾದ್ ತಲುಪಿದ್ದ ಅವರು, ಅಲ್ಲಿನ ಕುಟುಂಬಸ್ಥರ ಮನೆಯಲ್ಲಿ ಉಳಿದುಕೊಂಡಿದ್ದರು.‌ ಬುಧವಾರ ಅಲ್ಲಿಂದ ಯಾತ್ರೆ ಅರಂಭಿಸಿದ್ದರು. ರಿಯಾದ್ ನಿಂದ 250 ಕಿ.ಮೀ. ದೂರದ ಝುಲ್ಫಾ ಎಂಬಲ್ಲಿ ಘಟನೆ ನಡೆದಿದ್ದು, ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!