- Advertisement -
![]()
- Advertisement -
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮಿತಿಮೀರಿದ್ದು ಮಳೆಯಿಂದಾಗಿ ಅದೆಷ್ಟೋ ಮಂದಿ ಮನೆಗಳನ್ನು ತೊರೆಯುವಂತಾಗಿದೆ. ಮಳೆಯಿಂದಾಗಿ ಮನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವವರ ನೋವಿಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಸ್ಪಂದಿಸುತ್ತಿದ್ದು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ತೊಂದರೆಗೊಳಗಾದ ಮನೆಮಂದಿ ಶ್ರೀ ಕ್ಷೇತ್ರಕ್ಕೆ ಬಂದು ತಮ್ಮ ಮನೆಯ ಸದಸ್ಯರಿಗೆ ಅನ್ನವನ್ನು ತೆಗೆದುಕೊಂಡು ಹೋಗಬೇಕಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಸಂಪರ್ಕಿಸಬೇಕಾದ ಸಂಖ್ಯೆ:
ದಿಲ್‌ರಾಜ್ ಆಳ್ವ ಮಂಗಳಾದೇವಿ:9900512727
ರಾಜೇಂದ್ರ ಚಿಲಿಂಬಿ: 9972185251
ಕಿರಣ್ ಕೊಡಿಯಾಲ್ ಬೈಲ್: 7899509356
ಅರುಣ್ ಕದ್ರಿ- 9243303805
- Advertisement -


