Thursday, June 25, 2026
Homeಕರಾವಳಿಮಂಗಳೂರುಮಂಗಳೂರು; ತೆಂಗಿನಕಾಯಿ ತೆಗೆಯಲು ಮರಕ್ಕೆ ಹತ್ತಿದ್ದ ವ್ಯಕ್ತಿ ಹೃದಯಾಘಾತವಾಗಿ ಮರದಲ್ಲೇ ಸಾ*ವು

ಮಂಗಳೂರು; ತೆಂಗಿನಕಾಯಿ ತೆಗೆಯಲು ಮರಕ್ಕೆ ಹತ್ತಿದ್ದ ವ್ಯಕ್ತಿ ಹೃದಯಾಘಾತವಾಗಿ ಮರದಲ್ಲೇ ಸಾ*ವು

- Advertisement -
- Advertisement -

ಮಂಗಳೂರು; ತೆಂಗಿನಕಾಯಿ ತೆಗೆಯಲು ಮರಕ್ಕೆ ಹತ್ತಿದ್ದ ವ್ಯಕ್ತಿ ಹೃದಯಾಘಾತವಾಗಿ ಮರದಲ್ಲೇ ಸಾವನ್ನಪ್ಪಿರುವ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ.

ಜಯರಾಮ ಶೆಟ್ಟಿ(75) ಮೃತರು. ಸುರತ್ಕಲ್‌ನ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಬುಧವಾರ ಕಟೀಲು ಸಮೀಪದ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದಾರೆ.ಈ ಸಂದರ್ಭ ತೆಂಗಿನ ಮರದಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಆದರೆ ಈ ಸಂದರ್ಭ ಯಾರೂ ಇಲ್ಲದ ಕಾರಣ ಗಮನಕ್ಕೆ ಬಂದಿಲ್ಲ, ಸಂಜೆ ತೆಂಗಿನ ಮರದಲ್ಲಿ ವ್ಯಕ್ತಿ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳ ಮತ್ತು ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದವರ ಸಹಾಯದಿಂದ ಜಯರಾಮ ಶೆಟ್ಟಿಯವರ ಮೃತ ದೇಹವನ್ನು ಕೆಳಗೆ ಇಳಿಸಲಾಗಿದೆ.ಜಯರಾಮ ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!