Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; ನಿಷೇಧಿತ MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾತನ ಬಂಧನ

ಮಂಗಳೂರು; ನಿಷೇಧಿತ MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾತನ ಬಂಧನ

- Advertisement -
- Advertisement -

ಮಂಗಳೂರು; ನಿಷೇಧಿತ MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾತನನ್ನು ಬಂಧನ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ನಿವಾಸಿ, ಸದ್ಯ ಉಳ್ಳಾಲ ತಾಲೂಕಿನ ಕುಕ್ಕದ ಕಟ್ಟೆಯಲ್ಲಿ ವಾಸವಿದ್ದ ಜೋರ್ಡನ್ (21 ) ಬಂಧಿತ.

ಆತನ ವಶದಿಂದ 55 ಗ್ರಾಂ MDMA ಮಾದಕ ವಸ್ತು, 1 ಮೊಬೈಲ್ ಫೋನ್, ಡಿಜಿಟಲ್ ತೂಕದ ಮಾಪನ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆರೋಪಿತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 14/2026,ಕಲಂ : 8(ಸಿ), 22(ಎ), 22(ಬಿ), 22(ಸಿ) NDPS ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!