Wednesday, June 3, 2026
Homeಕರಾವಳಿಮಂಗಳೂರು: ಉರುಳಿಗೆ ಸಿಲುಕಿ ಚಿರತೆ ಸಾವು

ಮಂಗಳೂರು: ಉರುಳಿಗೆ ಸಿಲುಕಿ ಚಿರತೆ ಸಾವು

- Advertisement -
- Advertisement -

ಮಂಗಳೂರು: ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿ ನಡೆದಿದೆ. ಗುಡ್ಡೆಯಲ್ಲಿ ಉರುಳಿಗೆ ಸಿಕ್ಕಿ ಚಿರತೆ ಸಾವನ್ನಪ್ಪಿದೆ.

ಗುಡ್ಡೆಯಲ್ಲಿ ಸ್ಥಳೀಯರು ಕಾಡು ಪ್ರಾಣಿಗಳ ಹಾವಳಿ ತಡೆಯಲಾರದೆ ಇಟ್ಟಿದ್ದ ಉರುಳಿಗೆ ಆಹಾರ ಹುಡುಕಿ ಬಂದಿದ್ದ ಚಿರತೆ ರಾತ್ರಿ ಹೊತ್ತು ಬಿದ್ದಿದೆ ಎನ್ನಲಾಗಿದೆ. ಬೆಳಿಗ್ಗೆ ಸ್ಥಳೀಯ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದವನ್ನು ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ.

ಒದ್ದಾಡಿ ನರಳಿದ ಚಿರತೆ ಸ್ಪಲ್ಪ ಸಮಯದಲ್ಲೇ ಪ್ರಾಣ ಬಿಟ್ಟಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!