Wednesday, October 14, 2026
Homeಕರಾವಳಿಮಂಗಳೂರು ಮೀನುಗಾರಿಕಾ ಬೋಟು ದುರಂತ: ನಾಪತ್ತೆಯಾಗಿದ್ದ 6 ಮೀನುಗಾರರ ಪೈಕಿ ಇಬ್ಬರ ಶವ ಪತ್ತೆ

ಮಂಗಳೂರು ಮೀನುಗಾರಿಕಾ ಬೋಟು ದುರಂತ: ನಾಪತ್ತೆಯಾಗಿದ್ದ 6 ಮೀನುಗಾರರ ಪೈಕಿ ಇಬ್ಬರ ಶವ ಪತ್ತೆ

- Advertisement -
- Advertisement -

ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಮಗುಚಿ ಆರು ಮಂದಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ.

ಬೋಳಾರದ ಶ್ರೀರಕ್ಷಾ ಎಂಬ ಬೋಟ್ ನಲ್ಲಿ, ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ನ. 30ರ ಸೋಮವಾರ ಈ ಬೋಟ್ ತೆರಳಿತ್ತು. ಮೀನು ತುಂಬಿಕೊಂಡು ವಾಪಸ್ ಬರುವಾಗ ಗಾಳಿಗೆ ಮಗುಚಿಕೊಂಡು ಬಿದ್ದಿದೆ.

ದುರಂತದ ಸಂದರ್ಭದಲ್ಲಿ ದೋಣಿಯಲ್ಲಿದ್ದ 16 ಮಂದಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಈ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದವರ ಪತ್ತೆಗೆ ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ.

- Advertisement -

Latest News

error: Content is protected !!