Friday, June 5, 2026
Homeಕರಾವಳಿಬೆಳ್ತಂಗಡಿಯ ಫಿಯೋನಾ ಜಿ.ಡಿ ಕೋಸ್ತಗೆ ಚಿನ್ನದ ಪದಕ

ಬೆಳ್ತಂಗಡಿಯ ಫಿಯೋನಾ ಜಿ.ಡಿ ಕೋಸ್ತಗೆ ಚಿನ್ನದ ಪದಕ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಫಿಯೋನಾ ಜಿ.ಡಿ ಕೋಸ್ತ(ಮಂಗಳೂರು ವಿ.ವಿ ವಿದ್ಯಾರ್ಥಿನಿ) ಎಂಕಾಂನಲ್ಲಿ ಪ್ರಥಮ ರ್‍ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ಮಂಗಳೂರು ಯೂನಿವರ್ಸಿಟಿ ನಡೆಸಿದ 2019-20ನೇ ಸಾಲಿನ ಎಂಕಾಂ ಎಚ್.ಆರ್.ಡಿ ವಿಭಾಗದಲ್ಲಿ ಇವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ವಿ.ವಿಯಲ್ಲಿ ಇಂದು ನಡೆದ 39ನೇ ಘಟಿಕೋತ್ಸವದಲ್ಲಿ ಕುಲಾಧಿಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪದವಿಯನ್ನು ಫಿಯೋನಾ ಅವರಿಗೆ ನೀಡಿದರು.

ಸದ್ಯ ಫಿಯೋನಾ ವಾಮಂಜೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಬದ್ಯಾರಿನ ಗ್ರೆಟ್ಟಾ ಡಿ ಕೋಸ್ತ ಹಾಗೂ ದಿ.ಫೆಲಿಕ್ಸ್ ಡಿ ಕೋಸ್ತರ ಪುತ್ರಿ.

- Advertisement -

Latest News

error: Content is protected !!