Sunday, May 19, 2024
Homeಕರಾವಳಿಮಂಗಳೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

spot_img
- Advertisement -
- Advertisement -

ಮಂಗಳೂರು :- ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ಲ್ಯಾಬ್‍ಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ ಏನಿರಬೇಕು?
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂ.ಪಿ.ಎಡ್., ಪಿ.ಹೆಚ್.ಡಿ. / ಎಂ.ಪಿ.ಟಿ. (ಮಾಸ್ಟರ್‍ಆಫ್ ಫಿಸಿಯೋಥೆರಪಿ), ಪಿ.ಎಚ್.ಡಿ. / ಎಂ.ಎಸ್.ಸಿ. ಇನ್‍ಎಕ್ಸ್ರೈಸ್‍ಆಯಂಡ್ ಸ್ಪೋರ್ಸ್ ಸೈನ್ಸ್ ವಿದ್ಯಾರ್ಹತೆ
(ಕನಿಷ್ಠ 55% ಅಂಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳೊಂದಿಗೆ)

ಅರ್ಜಿ ಪಡೆಯುವುದು ಹೇಗೆ ?
ಅರ್ಹ ಆಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ https://mangaloreuniversity.ac.in/ನಿಂದ ಪಡೆಯಬಹುದು.

ಅರ್ಜಿ ಸಲ್ಲಿಕೆ ಹೇಗೆ ?
ಭರ್ತಿ ಮಾಡಿದಅರ್ಜಿಯನ್ನು ದಾಖಲೆಗಳ (ಎಸ್.ಎಸ್.ಎಲ್.ಸಿ ಮಾಕ್ಸ್‍ಕಾರ್ಡ್, ಪಿ.ಜಿ. ಮಾಕ್ಸ್‍ಕಾರ್ಡ್, ಜಾತಿ ಪ್ರಮಾಣ ಪತ್ರ, ಸರ್ವೀಸ್ ಸರ್ಟಿಫಿಕೇಟ್, ಯು.ಜಿ.ಸಿ.,ಎನ್.ಇ.ಟಿ., ಎಸ್.ಎಲ್.ಇ.ಟಿ. ಉತ್ತೀರ್ಣತೆ, ಎಂ.ಫಿಲ್., ಪಿ.ಹೆಚ್.ಡಿ. ಪದವಿ ಪ್ರಮಾಣ ಪತ್ರ) ಜೆರಾಕ್ಸ್ ಪ್ರತಿಗಳೊಂದಿಗೆ ಸೆಪ್ಟೆಂಬರ್ 30 ರಂದು ಸಂಜೆ 5.30 ಗಂಟೆಯ ಒಳಗಾಗಿ ಕುಲಸಚಿವರ ಕಚೇರಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಮತ್ತುದೂರವಾಣಿ ಸಂಖ್ಯೆಅಥವಾ ಮೊಬೈಲ್ ಸಂಖ್ಯೆಯನ್ನುಅರ್ಜಿಯಲ್ಲಿಕಡ್ಡಾಯವಾಗಿ ನಮೂದಿಸಬೇಕು.

ಸಂದರ್ಶನ ಹೇಗೆ ಮತ್ತು ಯಾವಾಗ ?
ಅಭ್ಯರ್ಥಿಗಳ ಸಂದರ್ಶನ ಆನ್ ಲೈನ್ ಮುಖಾಂತರ ನಡೆಯಲಿದ್ದು, ಸಂದರ್ಶನದ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ https://mangaloreuniversity.ac.in/ನಲ್ಲಿ ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕುಲಸಚಿವರಕಚೇರಿ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ, ದೂರವಾಣಿ ಸಂಖ್ಯೆ 0824-2287276, 0824-2287424 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!