Monday, June 8, 2026
Homeಕರಾವಳಿಮಂಗಳೂರು: ಅಪಾರ್ಟ್ ಮೆಂಟ್ ಸೆಕ್ರೆಟರಿಯಿಯಾಗಿದ್ದ ಮಾಜಿ ಸೈನಿಕನ ತಂಡದಿಂದಲೇ ಪ್ಲ್ಯಾಟ್ ನಲ್ಲಿ ಕಳ್ಳತನ, ಬೆಳ್ತಂಗಡಿಯ ವ್ಯಕ್ತಿ...

ಮಂಗಳೂರು: ಅಪಾರ್ಟ್ ಮೆಂಟ್ ಸೆಕ್ರೆಟರಿಯಿಯಾಗಿದ್ದ ಮಾಜಿ ಸೈನಿಕನ ತಂಡದಿಂದಲೇ ಪ್ಲ್ಯಾಟ್ ನಲ್ಲಿ ಕಳ್ಳತನ, ಬೆಳ್ತಂಗಡಿಯ ವ್ಯಕ್ತಿ ಸೇರಿ ನಾಲ್ವರ ಬಂಧನ

- Advertisement -
- Advertisement -

ಮಂಗಳೂರು: ತಿಂಗಳ ಹಿಂದೆ ಫ್ಲಾಟ್ ಒಂದರಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವೈನ್ ಶಾಪ್ ಒಂದರಲ್ಲಿ ಮೆನಜರ್ ಕೆಲಸ ಮಾಡಿಕೊಂಡಿರುವ ಸೇನೆಯಿಂದ ನಿವೃತ್ತಗೊಂಡಿರುವ ನವೀನ್ ಮತ್ತು ಅದೇ ವೈನ್ ಶಾಪಿನಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಬೆಳ್ತಂಗಡಿಯ ಸಂತೋಷ್, ತಿರುವನಂತಪುರ ಮೂಲದ ರಘು, ಅಮೇಶ್ ಎಂದು ಗುರುತಿಸಲಾಗಿದೆ.

ಮಂಗಳೂರು ಸುರತ್ಕಲ್ ಹೊರವಲಯದ ಇಡ್ಯಾ ಎಂಬಲ್ಲಿಯ ಜಾರ್ಡಿನ್ ಅಪಾರ್ಟ್ ಮೆಂಟ್ ಒಂದರ ಪ್ಲ್ಯಾಟ್ ಒಂದರಲ್ಲಿ ಈ ಕಳ್ಳತನ ನಡೆದಿದ್ದು, ಅಪಾರ್ಟ್ ಮೆಂಟ್ ನಲ್ಲಿದ್ದ ಸೆಕ್ರೆಟರಿ ಮಾಜಿ ಸೈನಿಕ ನವೀನ್ ಎಂಬಾತ ಈ ಕಳ್ಳತನದ ಮಾಸ್ಟರ್ ಮೈಂಡ್ ಆಗಿದ್ದಾನೆ.

ಕಳ್ಳತನ ಮಾಡಲು ಕೇರಳದಿಂದ ನುರಿತ ಕಳ್ಳರನ್ನು ಅಪಾರ್ಟ್ ಮೆಂಟ್ ಸೆಕ್ರೆಟರಿ ನವೀನ್ ಗೊತ್ತು ಮಾಡಿದ್ದು, ಬಾರ್ ಸಪ್ಲೈಯರ್ ಸಂತೋಷ್ ಎಂಬಾತನೊಂದಿಗೆ ಸೇರಿ ಅಪಾರ್ಟ್ ಮೆಂಟ್ ನಲ್ಲಿದ್ದ ವಿದ್ಯಾಪ್ರಭು ಎಂಬವರಿಗೆ ಸೇರಿದ ಪ್ಲ್ಯಾಟ್ ನಲ್ಲಿ ಕಳ್ಳತನ ನಡೆಸಿದ್ದರು.

ನಗರದಲ್ಲಿ ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು, ಫ್ಲಾಟ್ ನಲ್ಲಿ ಹೆಚ್ಚಿನ ಸಮಯ ಇರುತ್ತಿರಲಿಲ್ಲ. ರಾತ್ರಿ ಸಮಯದಲ್ಲಿ ಮಾತ್ರ ಫ್ಲಾಟ್ ನಲ್ಲಿ ವಾಸವಾಗಿರುತ್ತಿದ್ದರು. ಈ ಬಗ್ಗೆ ಅರಿತಿದ್ದ ಫ್ಲಾಟ್ ಸೆಕ್ರೆಟರಿ ನವೀನ್ ಕಳ್ಳತನ ಪ್ಲಾನ್ ಮಾಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಕಳ್ಳನ ನಡೆಸಿದ ಖದೀಮರು ಹಣವನ್ನು ದಂಧುವೆಚ್ಚ ಮಾಡಿದ್ದು, ಆರೋಪಿಗಳಿಂದ 224 ಗ್ರಾಂ ಚಿನ್ನ, 30.80 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!