Saturday, May 4, 2024
Homeಕರಾವಳಿವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶೀಘ್ರದಲ್ಲೇ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ ಮಂಗಳೂರು ವಿ.ವಿ...!

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶೀಘ್ರದಲ್ಲೇ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ ಮಂಗಳೂರು ವಿ.ವಿ…!

spot_img
- Advertisement -
- Advertisement -

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 6ನೇ ಸೆಮಿಸ್ಟರ್‌ ಪರೀಕ್ಷೆ ಇನ್ನೂ ನಡೆಯದಿರುವ ಕಾರಣ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಕೋರ್ಸ್‌ಗೆ ಸೇರೋಣವೆಂದರೆ ಅಲ್ಲಿ 6ನೇ ಸೆಮಿಸ್ಟರ್‌ನ ಅಂಕಪಟ್ಟಿ ಕೇಳುತ್ತಿರುವುದರಿಂದ ವಿದ್ಯಾರ್ಥಿಗಳು ದಾರಿತೋಚದಾಗಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ನೇ ಸೆಮಿಸ್ಟರ್‌ನಲ್ಲಿ ಬಾಕಿ ಇರುವ ತರಗತಿಗಳನ್ನು ಶೀಘ್ರ ಪೂರ್ಣಗೊಳಿಸಿ ಶೀಘ್ರ ಪರೀಕ್ಷೆ ನಡೆಸಲು ವಿ.ವಿ. ತೀರ್ಮಾನಿಸಿದೆ. ಸೆಪ್ಟಂಬರ್‌ ಕೊನೆಯಲ್ಲಿ ಪರೀಕ್ಷೆ ಆರಂಭವಾದರೆ 10 ದಿನದೊಳಗೆ ಪೂರ್ಣಗೊಳಿಸಿ, ಬಳಿಕ 15 ದಿನದೊಳಗೆ ಮೌಲ್ಯಮಾಪನ ಮುಗಿಸಿ ಅಕ್ಟೋಬರ್‌ ಮಧ್ಯಭಾಗದಲ್ಲಿ ಫಲಿತಾಂಶ ಪ್ರಕಟಿಸಬಹುದು ಎಂಬುದು ವಿ.ವಿ.ಯ ಚಿಂತನೆ.

1ನೇ ಸೆಮಿಸ್ಟರ್‌ ಅಂಕವು 2ನೇ ಸೆಮಿಸ್ಟರ್‌ಗೆ ಭಡ್ತಿಗೆ ಹಾಗೂ 3ನೇ ಸೆಮಿಸ್ಟರ್‌ ಅಂಕವು 4ನೇ ಸೆಮಿಸ್ಟರ್‌ಗೆ ಭಡ್ತಿಗೆ ಮಾತ್ರ ಅಗತ್ಯ. ಈ ವಿದ್ಯಾರ್ಥಿಗಳು ಮುಂದಿನ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಮುಂದು ವರಿಸುವ ಕಾರಣ ಮೌಲ್ಯಮಾಪನದ ತುರ್ತು ಇಲ್ಲ. ಆದರೆ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ ಬೇರೆಡೆ ತೆರಳುವ ಕಾರಣ ಹಾಗೂ 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಅದನ್ನು ಮೊದಲು ಪೂರ್ಣಗೊಳಿಸಬೇಕು ಎಂಬುದು ವಿ.ವಿ.ಯ ನಿರ್ಧಾರ.

ಇನ್ನು 6ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸುವ ಬಗ್ಗೆ ವಿ.ವಿ. ಈ ಹಿಂದೆ ಚಿಂತಿ ಸಿತ್ತು. ಆದರೆ ಗ್ರಾಮಾಂತರದಲ್ಲಿ ನೆಟ್‌ವರ್ಕ್‌ ಸಮಸ್ಯೆ/ತಾಂತ್ರಿಕ ತೊಂದರೆಯ ಹಿನ್ನೆಲೆಯಲ್ಲಿ ಆಫ್‌ಲೈನ್‌ ಪರೀಕ್ಷೆಯ ಮೊರೆಹೋಗಿದೆ.

6ನೇ ಸೆಮಿಸ್ಟರ್‌ ತರಗತಿ ಮಾಡಿ ಪರೀಕ್ಷೆ ನಡೆಸಿ 6 ಹಾಗೂ 5ನೇ ಸೆಮಿಸ್ಟರ್‌ ಮೌಲ್ಯಮಾಪನ ಮುಗಿ ಸಲು ಪ್ರಾಂಶುಪಾಲರ ಸಭೆಯಲ್ಲಿ ನಿರ್ಧರಿಸ ಲಾಗಿದೆ. ಅದರಂತೆ ಸದ್ಯ ಇತರ ಸೆಮಿಸ್ಟರ್‌ಗಳ ಮೌಲ್ಯ ಮಾಪನವನ್ನು ಸ್ಥಗಿತಗೊಳಿಸಲಾಗಿದೆ. 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟಿಸಲಾಗುವುದು ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!