Saturday, August 29, 2026
Homeಕರಾವಳಿಮಂಗಳೂರುಮಂಗಳೂರು ಮತ್ತೊಂದು ಮಣಿಪುರ ಆಗುವುದು ಬೇಡ; ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಮಂಗಳೂರು ಮತ್ತೊಂದು ಮಣಿಪುರ ಆಗುವುದು ಬೇಡ; ಮಾಜಿ ಸಚಿವ ರಮಾನಾಥ ರೈ ಹೇಳಿಕೆ

- Advertisement -
- Advertisement -

ಮಂಗಳೂರು: ಮಂಗಳೂರು ಮತ್ತೊಂದು ಮಣಿಪುರ ಆಗುವುದು ಬೇಡ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ಜಿಲ್ಲೆಯಲ್ಲಿ ನಡೆದಿರುವ ಗಲಭೆಗಳ ಹಿಂದೆ ಇರುವ ಪಿತೂರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲವು ಜನರಿಗೆ ಗಲಾಟೆ ಇದ್ದರೆ ಮಾತ್ರ ಅವರಿಗೆ ರಾಜಕೀಯ ಬೇಳೆ ಬೇಯಿಸಲು ಆಗುತ್ತದೆ ಎಂದು ಆರೋಪಿಸಿರುವ ರಮಾನಾಥ ರೈ, ಪ್ರಚೋದನೆಯ ಮಾತುಗಳಿಂದಲೇ ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆಯಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಇಲ್ಲಿ‌ನ ಘಟನೆಗಳು ಒಂದು ಹಂತ ಮುಂದಕ್ಕೆ ಹೋದರೆ ಜನಾಂಗೀಯ ಘರ್ಷಣೆಗೆ ಕಾರಣವಾಗಬಹುದು ಎಂದೂ ರಮಾನಾಥ ರೈ ಎಚ್ಚರಿಸಿದ್ದಾರೆ.ಆ್ಯಂಟಿ ಕಮ್ಯೂನಲ್ ಫೋರ್ಸ್ ಜಿಲ್ಲೆಯಲ್ಲಿ ಶಾಂತಿ ತರುತ್ತದೆ ಎಂದೂ ಮಾಜಿ ಸಚಿವ ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!