Thursday, June 4, 2026
Homeಕರಾವಳಿಮಂಗಳೂರುಮಂಗಳೂರು;  ಶಶಿ ಕೇಟರಿoಗ್ ಸರ್ವಿಸಸ್, ಬರೋಡ ಇದರ ಸಿ. ಎಂ. ಡಿ.ಶಶಿಧರ್ ಶೆಟ್ಟಿ ಬರೋಡ ರಿಂದ...

ಮಂಗಳೂರು;  ಶಶಿ ಕೇಟರಿoಗ್ ಸರ್ವಿಸಸ್, ಬರೋಡ ಇದರ ಸಿ. ಎಂ. ಡಿ.ಶಶಿಧರ್ ಶೆಟ್ಟಿ ಬರೋಡ ರಿಂದ ಒಕ್ಕೂಟದ ಸಭಾಭವನಕ್ಕೆ ರೂ. 1.25 ಕೋಟಿ ದೇಣಿಗೆ

- Advertisement -
- Advertisement -

ಮಂಗಳೂರು; ಪ್ರಸಿದ್ಧ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರು ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯ ಕೊಡುಗೈ ದಾನಿ, ಶಶಿ ಕೇಟರಿoಗ್ ಸರ್ವಿಸಸ್ ನ ಸಿ ಎಂ. ಡಿ. ಶಶಿಧರ್ ಶೆಟ್ಟಿ ಬರೋಡರವರು ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಡಾ.ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಹವಾ ನಿಯಂತ್ರಿತ ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ಸಂಪೂರ್ಣಗೊಳಿಸಿ ಇದೇ ಡಿಸೆoಬರ್ ತಿಂಗಳಿನಲ್ಲಿ ಲೋಕಾರ್ಪಣೆ ಆಗಲೇಬೇಕೆಂಬ ಉದ್ದೇಶದಿಂದ ರೂ. 1.25 ಕೋಟಿ ದೇಣಿಗೆ ನೀಡಿದ್ದಾರೆ. ಇವರು 2018 ರಿಂದ ದೇಣಿಗೆ ನೀಡಿ ಮಹಾ ನಿರ್ದೇಶಕರಾಗಿ ಒಕ್ಕೂಟದ ಹಲವಾರು ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿರುತ್ತಾರೆ. ಇವರಿಗೆ ಹಾಗೂ ಇವರ ಕುಟುಂಬಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದಯೆ ಸದಾ ಇರಲಿ ಎಂದು ಮನಸಾರೆ ಪ್ರಾರ್ಥಿಸುತ್ತೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.)ಮಂಗಳೂರು ಇದರ ಪದಾಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!