Sunday, June 29, 2025
Homeಅಪರಾಧಮಂಗಳೂರು: ದುಷ್ಕರ್ಮಿಗಳಿಂದ ಕೂಳೂರು ಬಳಿಯ ನಾಗನಕಟ್ಟೆ ದ್ವಂಸ; ಆರೋಪಿಗಳ ಬಂಧನಕ್ಕೆ ಬಜರಂಗದಳ ಆಗ್ರಹ

ಮಂಗಳೂರು: ದುಷ್ಕರ್ಮಿಗಳಿಂದ ಕೂಳೂರು ಬಳಿಯ ನಾಗನಕಟ್ಟೆ ದ್ವಂಸ; ಆರೋಪಿಗಳ ಬಂಧನಕ್ಕೆ ಬಜರಂಗದಳ ಆಗ್ರಹ

spot_img
- Advertisement -
- Advertisement -

ಮಂಗಳೂರು: ಕೂಳೂರು ವಿ ಆರ್ ಎಲ್ ಮುಂಭಾಗದಲ್ಲಿದ್ದ ಕೊಟ್ಯಾನ್ ಕುಟುಂಬಸ್ಥರ ನಾಗನ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ದ್ವಂಸ ಮಾಡಿರುವ ಘಟನೆ ನಡೆದಿದೆ.

ವಿಆರ್ ಎಲ್ ಲಾಜಿಸ್ಟಿಕ್ ಕಚೇರಿಯ ವಿರುದ್ಧ ದಿಕ್ಕಿನಲ್ಲಿರುವ ನಾಗನ ಕಟ್ಟೆಯ ಒಳಭಾಗಕ್ಕೆ ನುಗ್ಗಿರುವ ದುಷ್ಕರ್ಮಿಗಳು ನಾಗನ ಕಲ್ಲು ಮತ್ತು ಹಿತ್ತಾಳೆಯ ನಾಗನ ಜಿಡೆಯನ್ನು ಪುಡಿಗಟ್ಟಿದ್ದಾರೆ. ಎರಡು ದಿನಗಳ ನಡುವೆ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಕಾವೂರು ಪೊಲೀಸರು ಮತ್ತು ಬಜರಂಗದಳ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾಗನ ಕಟ್ಟೆಗೆ ಹಾನಿ ಎಸಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಬಜರಂಗದಳ ಆಗ್ರಹಿಸಿದೆ.



ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೇಕ ಸಮಯದಿಂದ ಇಂತಹ ದುಷ್ಕೃತ್ಯ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದು . ಈ ಕೃತ್ಯದ ಹಿಂದಿನ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

- Advertisement -
spot_img

Latest News

error: Content is protected !!