Friday, May 17, 2024
Homeಕರಾವಳಿಮಂಗಳೂರು: ಕೊಣಾಜೆ ಯೂನಿವರ್ಸಿಟಿ ಬಳಿ ಡ್ರಗ್ಸ್ ಜಾಲ ಪತ್ತೆ, 17 ಲಕ್ಷ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು: ಕೊಣಾಜೆ ಯೂನಿವರ್ಸಿಟಿ ಬಳಿ ಡ್ರಗ್ಸ್ ಜಾಲ ಪತ್ತೆ, 17 ಲಕ್ಷ ಮೌಲ್ಯದ ಸೊತ್ತು ವಶಕ್ಕೆ

spot_img
- Advertisement -
- Advertisement -

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಜೇಶ್ವರ ಉಪ್ಪಳ ಗೇಟ್ ಬಳಿ ನಿವಾಸಿಗಳಾದ ಮಹಮ್ಮದ್ ಮುನಾಫ್‌, ಮಹಮ್ಮದ್ ಮುಝಾಂಬಿಲ್ ಮತ್ತು ಅಹಮ್ಮದ್ ಮಸೂಕ್ ರವರನ್ನು ವಶಕ್ಕೆ ಪಡೆದಿದ್ದಾರೆ.

ಕೊಣಾಜೆ ಪೊಲೀಸ್ ಠಾಣಾ ಪೊಲೀಸರಿಗೆ ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ದೊರೆತಾಗ ಕೊಣಾಜೆ ವಿಶ್ವವಿದ್ಯಾನಿಲಯದ ಗಣೇಶ್ ಮಹಲ್ ಎಂಬಲ್ಲಿ ಕಾರೊಂದನ್ನು ನಿಲ್ಲಿಸಿ ತಪಾಸಣೆ ಮಾಡಿ, ಅವರಿಂದ ಒಟ್ಟು 170 ಗ್ರಾಂ ತೂಕದ ಸುಮಾರು 10,20,000 ರೂ ಮೌಲ್ಯದ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು 5 ಲಕ್ಷ ಮೌಲ್ಯದ ಕಾರನ್ನು ಹಾಗೂ 17,000 ರೂ. ಮೌಲ್ಯದ ನಾಲ್ಕು ಮೊಬೈಲ್ ಫೋನ್ ಗಳುನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 17,37,000 ಆಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ವಾಣಿಜ್ಯ ಪ್ರಮಾಣದ ದೊಡ್ಡ ಮೊತ್ತದ ಎಂ.ಡಿ.ಎಂ.ಎಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನುನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಕಾರ್ಯಾಚರಣೆಯನ್ನು ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಸಿಸಿಬಿ ವಿಭಾಗದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಪಿ.ಎಸ್.ಐ ಶರಣಪ್ಪ ಭಂಡಾರಿ, ಮಲ್ಲಿಕಾರ್ಜುನ್ ಬಿರಾದಾರ, ಮಂಗಳೂರು ಸಿಸಿಬಿ ವಿಭಾಗದ ಪಿಎಸ್‌ಐ ಪ್ರದೀಪ್ ಮತ್ತು ಎಎಸ್‌ಐ ಮೋಹನ್, ರೆಜಿ, ನಾಗರಾಜ ಲಮಾಣಿ, ಪುರುಷೋತ್ತಮ, ಅಭಿಷೇಕ್, ಉಮೇಶ್ ರಾಠೋಡ್, ಮಂಜುನಾಥ್, ಮಂಜಪ್ಪ ಮತ್ತು ಸಿಸಿಬಿ ವಿಭಾಗದ ಸಿಬ್ಬಂದಿ ಜಬ್ಬಾರ್, ಮೋಹನ್ ಮತ್ತು ಮಣಿ ಯವರೊಂದಿಗೆ ಜಂಟಿ ಕಾರ್ಯಚರಣೆ ನಡೆಸಲಾಗಿದೆ.

- Advertisement -
spot_img

Latest News

error: Content is protected !!