Sunday, June 29, 2025
Homeಕರಾವಳಿಇಂದಿನಿಂದ ದೇಶೀ ವಿಮಾನಯಾನಕ್ಕೆ ಮಂಗಳೂರು ವಿಮಾನ ನಿಲ್ದಾಣ ಸಜ್ಜು

ಇಂದಿನಿಂದ ದೇಶೀ ವಿಮಾನಯಾನಕ್ಕೆ ಮಂಗಳೂರು ವಿಮಾನ ನಿಲ್ದಾಣ ಸಜ್ಜು

spot_img
- Advertisement -
- Advertisement -

ಮಂಗಳೂರು:ದೀರ್ಘ ಕಾಲದ ಮಾರಕ ಕೋವಿಡ್ 19 ಲಾಕ್ ಡೌನ್ ನಂತರ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಸೇವೆ ಆರಂಭಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 25ರಿಂದ 6 ವಿಮಾನಗಳು ಹಾರಾಟ ಆರಂಭಿಸಲಿವೆ. ಆರೂ ವಿಮಾನಗಳ ವೇಳಾಪಟ್ಟಿಯನ್ನು ಮೇ 25ರಿಂದ ಜೂನ್‌ 30ರ ವರೆಗೆ ಅನ್ವಯವಾಗುವಂತೆ ನಿಗದಿಗೊಳಿಸಲಾಗಿದೆ. ಆರು ವಿಮಾನಗಳ ಪೈಕಿ ಬೆಂಗಳೂರಿಗೆ 3, ಮುಂಬಯಿಗೆ 2 ಮತ್ತು ಚೆನ್ನೈಗೆ 1 ವಿಮಾನ ಹಾರಾಟ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀದಿನ ಬೆಳಗ್ಗೆ 8.35ರಿಂದ ರಾತ್ರಿ 9.35ರ ವರೆಗೆ ವಿಮಾನ ನಿಲ್ದಾಣ ಕಾರ್ಯಾಚರಿಸಲಿದೆ.


ಸ್ಪೈಸ್ ಜೆಟ್‌ನ ಸಂಸ್ಥೆಯ ವಿಮಾನಗಳು ಮುಂಬೈ-ಮಂಗಳೂರು ಹಾಗೂ ಬೆಂಗಳೂರು-ಮಂಗಳೂರು ಮಧ್ಯೆ ಮೇ.25ರಿಂದಲೇ ಹಾರಾಟ ಪ್ರಾರಂಭಿಸಲಿವೆ. ಅದೇ ರೀತಿ ಇಂಡಿಗೊ ವಿಮಾನಗಳು ಮಂಗಳೂರು-ಬೆಂಗಳೂರು, ಮುಂಬೈ-ಮಂಗಳೂರು, ಚೆನ್ನೈ-ಮಂಗಳೂರು ಮಧ್ಯೆ ಹಾರಾಟ ನಡೆಸಲಿವೆ. ವಿಮಾನ ಸಂಸ್ಥೆಗಳು ಈಗಾಗಲೇ ಪ್ರಕಟಣೆ ನೀಡಿದಂತೆಯೇ ಕಾರ್ಯನಿರ್ವಹಿಸುವುದು ಬಹುತೇಕ ನಿಶ್ಚಿತ. ಆದರೆ ಮುಂಬೈ ಏರ್‌ಪೋರ್ಟ್ ಇನ್ನೂ ಕಾರ್ಯಾಚರಣೆಗೆ ಸಿದ್ಧಗೊಂಡಂತೆ ಕಾಣುತ್ತಿಲ್ಲ. ಹಾಗಾಗಿ ಅಲ್ಲಿಂದ ವಿಮಾನ ಬರುವುದು ಸಂಶಯ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ವಾರಂಟೈನ್ ಕಡ್ಡಾಯ:
ದೇಶೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗೂ ಸರಕಾರಿ ಕ್ವಾರಂಟೈನ್ 7 ದಿನ ಹಾಗೂ ಮತ್ತೆ 7 ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿರಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.
ಆಗಮಿಸುವ ಪ್ರಯಾಣಿಕರಿಗೆ ನೆರವು ನೀಡುವುದಕ್ಕೆ ವಿಮಾನ ನಿಲ್ದಾಣ ಟರ್ಮಿನಲ್‌ನಲ್ಲಿ ಡೆಸ್ಕ್ ಪ್ರಾರಂಭಿಸಲಾಗಿದೆ, ಬರುವ ಪ್ರಯಾಣಿಕರನ್ನು ಅಲ್ಲಿ ಗುರುತಿಸಿ, ಅವರನ್ನು ಆಯಾ ತಾಲೂಕುಗಳಿಗೆ ಕಳುಹಿಸಿ ಕ್ವಾರಂಟೈನ್ ಮಾಡಲಾಗುವುದು. ರೈಲಿನಲ್ಲಿ ಬರುವವರಿಗೂ ಇದೇ ವಿಧಾನ ಅನುಸರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ವೃದ್ಧರು, ಮಕ್ಕಳು, ಗರ್ಭಿಣಿಯರಿಗೆ ಪರೀಕ್ಷೆ ನಡೆಸಿ ಎರಡು ದಿನಗಳಲ್ಲಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳುಹಿಸಿ ಅಲ್ಲಿ ನಿಗಾವಣೆಯಲ್ಲಿ ಇರಿಸಲಾಗುವುದು.

- Advertisement -
spot_img

Latest News

error: Content is protected !!