Thursday, May 16, 2024
Homeಕ್ರೀಡೆಹಾಕಿ ದಂತಕಥೆ ಬಲಬೀರ್ ಸಿಂಗ್ ಸೀನಿಯರ್ ಇನ್ನಿಲ್ಲ

ಹಾಕಿ ದಂತಕಥೆ ಬಲಬೀರ್ ಸಿಂಗ್ ಸೀನಿಯರ್ ಇನ್ನಿಲ್ಲ

spot_img
- Advertisement -
- Advertisement -

ನವದೆಹಲಿ: ಮೂರು ಬಾರಿಯ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ನಿಧನರಾಗಿದ್ದಾರೆ.

95 ವರ್ಷದ ಬಲ್ಬೀರ್ ಸಿಂಗ್ ಅವರು ಕಳೆದ ಎರಡು ವಾರಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲ ಇಂದು ಬೆಳಿಗ್ಗೆ 6.30 ರ ಸುಮಾರಿಗೆ ಬಲ್ಬೀರ್ ಸಿಂಗ್ ನಿಧನರಾಗಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

1948, 1952 ಮತ್ತು 1956 ರ ಒಲಿಂಪಿಕ್ಸ್ ನಲ್ಲಿ ವಿಜೇತರಾಗಿದ್ದ ಹಾಕಿ ತಂಡದ ಸದಸ್ಯರಾಗಿದ್ದರು. ಅವರ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದೆ.

ಒಲಿಂಪಿಕ್ ಫೈನಲಲ್ ಪಂದ್ಯದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಬಲಲ್ಬೀರ್ ಅವರ ದಾಖಲೆ ಇನ್ನೂ ಯಾರೂ ಮುರಿಯಲಾಗಿಲ್ಲ. ಭಾರತದ ಶ್ರೇಷ್ಠ ಕ್ರೀಡಾಳುಗಳಲ್ಲಿ ಒಬ್ಬರಾಗಿರುವ ಬಲ್ಬೀರ್ ಸಿಂಗ್, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಆಧುನಿಕ ಒಲಿಂಪಿಕ್ ಇತಿಹಾಸದ ವಿಶ್ವದ 16 ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಗೌರವ ಪಡೆದಿರುವ ಏಕೈಕ ಭಾರತೀಯ ಬಲ್ಬೀರ್ ಸಿಂಗ್. ಸೀನಿಯರ್

- Advertisement -
spot_img

Latest News

error: Content is protected !!