Saturday, June 6, 2026
Homeಕರಾವಳಿಉದ್ಯಮಿ ಗಂಗಾಧರ್ ಲವ್ ಜಿಹಾದ್ ಪ್ರಕರಣ: ಮೋಸ ಹೋದ ಮುಸ್ಲಿಂ ಮಹಿಳೆಯಿಂದ ನ್ಯಾಯಕ್ಕೆ ಆಗ್ರಹ

ಉದ್ಯಮಿ ಗಂಗಾಧರ್ ಲವ್ ಜಿಹಾದ್ ಪ್ರಕರಣ: ಮೋಸ ಹೋದ ಮುಸ್ಲಿಂ ಮಹಿಳೆಯಿಂದ ನ್ಯಾಯಕ್ಕೆ ಆಗ್ರಹ

- Advertisement -
- Advertisement -

ಮಂಗಳೂರು: ಕೆಲದಿನಗಳ ಹಿಂದೆ 62 ವರ್ಷದ ಮಂಗಳೂರಿನ ಉದ್ಯಮಿ ಗಂಗಾಧರ್ ಎಂಬವರು ಇಸ್ಲಾಂಗೆ ಮತಾಂತರವಾಗಿ 22 ವರ್ಷದ ಯುವತಿಯನ್ನು ಮದುವೆಯಾಗಿರುವ ಪ್ರಕರಣ ನಾನಾ ರೀತಿಯ ಆಯಾಮ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಇದೀಗ ಗಂಗಾಧರ್ ರ ಕಾಮ ಪುರಾಣವನ್ನು ಸ್ವತಃ ಸಂತ್ರಸ್ತ ಮಹಿಳೆ ಸಮಾಜದ ಮುಂದೆ ಬಿಚ್ಚಿಟ್ಟಿದ್ದಾಳೆ.

ಓರ್ವ ಕಾಮುಕ, ಶ್ರೀಮಂತ ಮುದುಕ ತನ್ನ ತೆವಲುಗಳಿಗಾಗಿ ವಿವಿಧ ವೇಷಗಳನ್ನು ಕಟ್ಟಿ ಐದಾರು ಮದುವೆ ಆಗಿದ್ದಾನೆ. ಮುಸ್ಲಿಂ ಹೆಣ್ಣು ಮಗಳನ್ನು ಮದುವೆ ಆಗುವಾಗ ತಾನು ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ ಎಂದು ಮದುವೆ ಬ್ರೋಕರ್ ಗಳ ಜೊತೆ ಸೇರಿ ನಾಟಕ ಆಡಿದ್ದಾನೆ ಎಂದು ತಿಳಿದು ಬಂದಿದೆ.

ಗಂಗಾಧರ್ ನಿಂದ ಮೋಸ ಹೋಗಿರುವ ಪುತ್ತೂರಿನ ಮುಸ್ಲಿಂ ಮಹಿಳೆ ಮಂಗಳೂರಿನ DYFI ಕಚೇರಿಗೆ ಭೇಟಿ ನೀಡಿ, ತನಗೆ ಆಗಿರುವ ಮೋಸಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾಳೆ. ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡಿರುವ ಮಹಿಳೆ, ತನ್ನ 9 ವರ್ಷದ ಮಗನನ್ನು ಬೀಡಿ ಕಟ್ಟಿ ಬಾಡಿಗೆ ಮನೆಯಲ್ಲಿ ಸಾಕುತ್ತಿದ್ದಾಳೆ.

ಯಾರೋ ಕಳ್ಳ ಬ್ರೋಕರ್ ಗಳು “ನಿನ್ನ ಬದುಕಿಗೆ ಒಂದು ದಾರಿಯಾಗುತ್ತದೆ”. ಎಂದು ಹಲವು ಸುಳ್ಳಿನ ಕನಸುಗಳನ್ನು ಬಿತ್ತಿ, ಬಾಡಿಗೆ ಮೌಲವಿಯನ್ನು ಕರೆ ತಂದು ನಿಕಾಹ್ ಮಾಡಿ ಕಮೀಷನ್ ಎತ್ತಿ ಮಾಯ ಆಗಿದ್ದಾರೆ. ನಂತರ ಈ ಗಂಗಾಧರ್, ತಿಂಗಳುಗಳ ಕಾಲ ಸಂಸಾರ ನಡೆಸಿ, ಕೊನೆಗೆ ಬಲವಂತದ ಅಬಾರ್ಷನ್ ಮಾಡಿ, ದೈಹಿಕ ಹಿಂಸೆ ನೀಡಿ ಓಡಿಸಿದ್ದಾನೆ ಎಂದು ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ.

ಇಲ್ಲಿಯವರೆಗೆ ಐದಕ್ಕೂ ಹೆಚ್ಚು ಹೆಣ್ಣು ಮಕ್ಕಳು ಈತನ ಕಾಮುಕತನದಿಂದ ವಂಚನೆಗೊಳಗಾಗಿದ್ದಾರೆ. ಇದರಲ್ಲಿ ಹಿಂದು ಮುಸ್ಲಿಂ ಎರಡೂ ಧರ್ಮದವರೂ ಇದ್ದಾರೆ‌ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!