Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಆಕಸ್ಮಿಕವಾಗಿ ಬಾವಿಗೆ ಬಿದ್ದು ವೃದ್ಧೆ ಸಾವು

ಮಂಗಳೂರು; ಆಕಸ್ಮಿಕವಾಗಿ ಬಾವಿಗೆ ಬಿದ್ದು ವೃದ್ಧೆ ಸಾವು

- Advertisement -
- Advertisement -

ಮಂಗಳೂರು; ಆಕಸ್ಮಿಕವಾಗಿ ಬಾವಿಗೆ ಬಿದ್ದು ವೃದ್ಧೆ ಸಾವನ್ನಪ್ಪಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ಬಳಿ ನಡೆದಿದೆ. ಬಾದಾಮಿ ಮೂಲದ ಮುಲ್ಕಿಯಲ್ಲಿ ವಾಸ್ತವ್ಯವಿರುವ ಫಕೀರವ್ವ (90) ಮೃತ ವೃದ್ಧೆ.

ಮೃತ ಫಕೀರವ್ವ ಕಳೆದ ಹಲವಾರು ವರ್ಷಗಳಿಂದ ಮುಲ್ಕಿಯಲ್ಲಿ ನೆಲೆಸಿದ್ದು ರಾತ್ರಿ ಹೊತ್ತು ಪಂಚಮಲ್ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಟ್ಟಡ ಒಂದರ ಎದುರು ಬದಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ.

ಮಾಜೀ ನಪಂ ಸದಸ್ಯ ಹರ್ಷ ರಾಜ ಶೆಟ್ಟಿ,ಮುಲ್ಕಿ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಳಿಕ ಅಗ್ನಿಶಾಮಕ ದಳ ಆಗಮಿಸಿ ಮೃತ ದೇಹವನ್ನು ಬಾವಿಯಿಂದ ತೆರವುಗೊಳಿಸಿದ್ದಾರೆ.ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!