ಕೊರೋನಾ ವೈರಸ್ ವಿರುದ್ಧ ಯೋಧರಂತೆ ಹೋರಾಡುತ್ತಿರುವ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ನಡೆದರೆ ಗಂಭೀರವಾಗಿ ಪರಿಗಣಿಸಲಾಗುವುದು. ಹಲ್ಲೆ ಮಾಡಿದವರನ್ನು ಗೂಂಡಾ ಕೇಸ್ ಹಾಕುವ ಮೂಲಕ ಜೈಲಿಗಟ್ಟಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಹೇಳಿರುವ ಬೆನ್ನಲ್ಲೇ ಮಂಗಳೂರಿನ ವಾಹನ ಸವಾರ ಒಬ್ಬ ಕರ್ತವ್ಯ ನಿರತರಾಗಿದ್ದ ಪೊಲೀಸ್ ಅಧಿಕಾರಿಯ ಮೇಲೆಯೇ ವಾಹನ ಹತ್ತಿಸಿ ದರ್ಪ ತೋರಿಸದ್ದಾನೆ
ಡ್ಯೂಟಿಮಾಡುತ್ತಿದ್ದ ಟ್ರಾಫಿಕ್ ಎಎಸ್‌ಐ ಸೂರಜ್ ಕುಮಾರ್ ಮೇಲೆ ವಾಹನ ಹತ್ತಿಸಲು ಯತ್ನಿಸಿದ ಆರೋಪದ ಮೇಲೆ ಸಾಧಾಕತ್ ನನ್ನು ಬಂಧನ ಮಾಡಲಾಗಿದೆ
ಲಾಕ್‌ಡೌನ್ ಹಿನ್ನಲೆಯಲ್ಲಿ ಬರ್ಕೆ ಬಿಜೈ ಬಿಗ್ ಬಜಾರ್ ಬಳಿ ಬ್ಯಾರಿಕೇಡ್ ಹಾಕಲಾಗಿದ್ದು ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡುತ್ತಿದ್ದರು. ಆರೋಪಿಯ ವಾಹನವನ್ನು ಕೂಡಾ ಪೊಲೀಸರು ತಪಾಸಣೆ ನಡೆಸಲೆಂದು ತಡೆಯಲೆತ್ನಿಸಿದ್ದು ಈ ಸಂದರ್ಭದಲ್ಲಿ ಆರೋಪಿ ಪೊಲೀಸರ ಮೇಲೆಯೇ ವಾಹನ ಹತ್ತಿಸಿದ್ದಾನೆ. ಈ ವೇಳೆ ಟ್ರಾಫಿಕ್ ಎಎಸ್‌ಐ ಸೂರಜ್ ಕುಮಾರ್ ಅವರಿಗೆ ಗಾಯವಾಗಿದ್ದು ಪೊಲೀಸ್ ಕನ್ನಡಕ ತುಂಡಾಗಿದೆ.