Tuesday, July 14, 2026
Homeಕರಾವಳಿನ್ಯೂಜಿಲ್ಯಾಂಡ್: ಮಂಗಳೂರು ಮೂಲದ ದಂಪತಿಯನ್ನು ಇರಿದು ಕೊಂದ ಮಗ !!

ನ್ಯೂಜಿಲ್ಯಾಂಡ್: ಮಂಗಳೂರು ಮೂಲದ ದಂಪತಿಯನ್ನು ಇರಿದು ಕೊಂದ ಮಗ !!

- Advertisement -
- Advertisement -

ಅಕ್ಲ್ಯಾಂಡ್: ಚಾಕುವಿನಿಂದ ತನ್ನ ಹೆತ್ತವರನ್ನೇ ಮಗ ಇರಿದು ಭರ್ಬರವಾಗಿ ಕೊಲೆ ಮಾಡಿರುವ ಘಟನೆ ನ್ಯೂಜಿಲ್ಯಾಂಡ್ ನ ಅಕ್ಲ್ಯಾಂಡ್ ನಗರದಲ್ಲಿ ನಡೆದಿದೆ.

ಮೃತರನ್ನು ಮಂಗಳೂರಿನ ಬಲ್ಮಠ ಮೂಲದ ಎಲ್ಸಿ ಬಂಗೇರ ಮತ್ತು ಅವರ ಪತಿ ಹರ್ಮನ್ ಬಂಗೇರ ಕೊಲೆಯಾದ ದುರ್ದೈವಿಗಳು. ಈ ದಂಪತಿಯ 23 ವರ್ಷದ ಮಗ ಶೀಲ್ ಎಂಬಾತ ಈ ಕೊಲೆ ಮಾಡಿರುವುದು. ಹೆತ್ತವರ ಕೊಲೆ ನಡೆಸಿದ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಎಲ್ಸಿಯ ತಂದೆ ಎಡ್ವರ್ಡ್ ಅಮ್ಮನ್ನ ಬಲ್ಮಠದ ಶಾಂತಿ ಕೆಥೆಡ್ರಲ್ ನಲ್ಲಿ ಸಂಡೆ ಸ್ಕೂಲ್ ನಲ್ಲಿ ಶಿಕ್ಷರಾಗಿದ್ದರು. ಮರ್ಕೆರಾ ಹಿಲ್ ಚರ್ಚ್ ನಲ್ಲಿ ಹಿರಿಯರಾಗಿ ಗೌರವ ಹೊಂದಿದ್ದರು. ಎಲ್ಸಿ ಬಂಗೇರ ಮತ್ತು ಹರ್ಮನ್ ಬಂಗೇರ ದಂಪತಿಗಳು ಮಗನ ವಿದ್ಯಾಭ್ಯಾಸಕ್ಕೆಂದೇ ನ್ಯೂಜಿಲ್ಯಾಂಡ್ ತೆರಳಿದ್ದರು.

- Advertisement -

Latest News

error: Content is protected !!