Saturday, June 6, 2026
Homeತಾಜಾ ಸುದ್ದಿಐ ಫೋನ್ 14 ಪ್ರೋ ಮೊಬೈಲ್ ಖರೀದಿಸಲು ಕೇರಳದಿಂದ ದುಬೈಗೆ ಹೋದ ಯುವಕ; ಉಂದು ವಾ...

ಐ ಫೋನ್ 14 ಪ್ರೋ ಮೊಬೈಲ್ ಖರೀದಿಸಲು ಕೇರಳದಿಂದ ದುಬೈಗೆ ಹೋದ ಯುವಕ; ಉಂದು ವಾ ಮರ್ಲ್ ಮರ್ರೆ ಅಂದ ನೆಟ್ಟಿಗರು

- Advertisement -
- Advertisement -

ಕೇರಳ; ಕೆಲವರಲ್ಲಿ ಕೆಲವೊಂದು ಎಲೆಕ್ಟ್ರಾನಿಕ್ ವಸ್ತುಗಳ ಕ್ರೇಜ್ ಹೇಗಿರುತ್ತೆ ಅಂದ್ರೆ, ಅಯ್ಯೋ.. ಹಿಂಗೆಲ್ಲಾ ಮಾಡ್ತಾರಾ ಅನ್ಸುತ್ತೆ. ಅದರಲ್ಲೂ ಕೆಲವರಿಗಂತೂ ಮೊಬೈಲ್ ಫೋನ್ ಮೇಲೆ ಸಿಕ್ಕಾಪಟ್ಟೆ ಕ್ರೇಜ್. ಅದಕ್ಕೆ ಪಕ್ಕಾ ಎಕ್ಸಾಂಪಲ್ ಅನ್ನೋ ರೀತಿಯ ವ್ಯಕ್ತಿಯೊಬ್ಬರು ಕೇರಳದಲ್ಲಿದ್ದಾರೆ. ಈ ಮನುಷ್ಯ ಮಾಡಿರೋ ಸಾಧನೆ ನೋಡಿದ್ರೆ ನೀವೊಮ್ಮೆ ಯಪ್ಪಾ ಇದೆಲ್ಲಾ ಬೇಕಿತ್ತಾ ಗುರು ಅಂತಾ ಹೇಳ್ತೀರಾ..

ಅಷ್ಟಕ್ಕೂ ಇವ್ರು ಏನ್ ಮಾಡಿದ್ದಾರೆ ಗೊತ್ತಾ….ಅಂದ್ಹಾಗೆ ಇವ್ರು ಹೆಸ್ರು ಧೀರಜ್ ಪಲ್ಲಿಯಿಲ್. ಐಫೋನ್ 14 ಪ್ರೊ ಖರೀದಿಸಬೇಕು ಅಂತಾನೇ ಅವರು ಕೇರಳದಿಂದ ದುಬೈಗೆ ಹಾರಿದ್ದಾರೆ.

ಐಫೋನ್ ಪ್ರೊ 512 ಜಿಬಿ ಆವೃತ್ತಿಯನ್ನು ತಮ್ಮದಾಗಿಸಿಕೊಳ್ಳಲು ದುಬೈಗೆ ತೆರಳುತ್ತಿರುವುದಾಗಿ ಧೀರಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು. ಭಾರತದಲ್ಲಿ ಪ್ರೊ ಬೆಲೆ 1,59,900 ಆಗಿದ್ದು, ದುಬೈನಲ್ಲಿ ಅತಿ ಕಡಿಮೆ ಬೆಲೆಗೆ ದೊರೆಯುತ್ತದೆ ಎಂದು ಅಲ್ಲಿಗೆ ಹೋಗಿದ್ದಾರೆ.

ಧೀರಜ್ ಪಲ್ಲಿಯಿಲ್ ಅವರು ಐಫೋನ್ ಮಾದರಿಯನ್ನು 5,949 AED ಗೆ ಖರೀದಿಸಿದ್ದು ಭಾರತೀಯ ಬೆಲೆ ರೂ 1,29,000 ಆಗಿದೆ. ಆದರೆ ಅವರ ಪ್ರಯಾಣದ ವೆಚ್ಚ ಎಲ್ಲಾ ಸೇರಿದರೆ ಅವರಿಗೆ 10,000 ಹೆಚ್ಚುವರಿ ಖರ್ಚು ಆಗಿದೆ.

ಈ ಬಗ್ಗೆ ಧೀರಜ್ ಮಾದ್ಯಮಗಳ ಜೊತೆ ಮಾತನಾಡಿದ್ದು, ನಾನು ಐಫೋನ್‌ನ ಅಪ್ಪಟ ಅಭಿಮಾನಿಯಾಗಿದ್ದು, ಹೊಸ ಐಫೋನ್ ಬಿಡುಗಡೆಯಾದಾಗಲೆಲ್ಲಾ ನಾನು ದುಬೈಗೆ ತೆರಳಿ ಖರೀದಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಬಾರಿ ಐಫೋನ್ 14 ಪ್ರೊ ಖರೀದಿಸಲು ನಾಲ್ಕು ದಿನಗಳ ಸರತಿ ಸಾಲಿನಲ್ಲಿ ಕಾದಿರುವುದಾಗಿ ಬಹಿರಂಗಪಡಿಸಿದ್ದಾರೆ.ದುಬೈನ ಮಿರ್ಡಿಫ್ ಸಿಟಿ ಸೆಂಟರ್‌ನಲ್ಲಿರುವ ಪ್ರೀಮಿಯಂ ಆಯಪಲ್ ರಿಸೆಲ್ಲರ್‌ನಿಂದ ಮೊಬೈಲ್ ಖರೀದಿಸಿದ್ದಾರೆ. ಇನ್ನು ಧೀರಜ್ ಪೋಸ್ಟ್ ನೋಡಿದ ಅನೇಕರು ಏನ್ ಗುರು ನಿನ್ ಕಥೆ ಅಂತಿದ್ದಾರಂತೆ.

- Advertisement -

Latest News

error: Content is protected !!