Friday, June 5, 2026
Homeಕರಾವಳಿಸುಳ್ಯ;ಮದುವೆಗೆ ಬಂದ ಮಹಿಳೆಗೆ ಇರಿಯಲು ಹೋಗಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಸುಳ್ಯ;ಮದುವೆಗೆ ಬಂದ ಮಹಿಳೆಗೆ ಇರಿಯಲು ಹೋಗಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

- Advertisement -
- Advertisement -

ಸುಳ್ಯ; ಮದುವೆಗೆ ಬಂದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಸ್ಕ್ರ್ಯೂ ಡ್ರೈವರ್ ನಿಂದ ಇರಿಯಲು ಹೋಗಿ ಕೊನೆಗೆ ತಾನೇ ಆತ್ಮಹತ್ಯೆಗೆ ಯತ್ನಿಸಿ ಮಾಜಿ ಆಸ್ಪತ್ರೆ ಸೇರಿದ ಘಟನೆ ಗುರುವಾರ ಮಧ್ಯಾಹ್ನ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ನಡೆದಿದೆ.

ಮಡಿಕೇರಿಯ ಮೊಣಂಗೇರಿ ನಿವಾಸಿವಸಂತ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಗೂನಡ್ಕದ ಸಜ್ಜನ ಸಭಾಂಗಣದಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ಬಂದಿದ್ದ. ಅಲ್ಲಿ ಮಹಿಳೆಯೊಬ್ಬರಿಗೆ ಇರಿಯಲು ಹೋಗಿದ್ದಾನೆ. ಮಹಿಳೆ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದವರು ಆತನನ್ನು ಹೊರಗೆಳೆದು ತಂದಿದ್ದಾರೆ. ಹಾಗೇ ಬಂದವನು ಅಲ್ಲೇ ಇದ್ದ ತೋಟದ ಸಮೀಪ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

- Advertisement -

Latest News

error: Content is protected !!