Sunday, May 5, 2024
Homeತಾಜಾ ಸುದ್ದಿಪೋರ್ನ್ ಸೈಟ್ ಗಳಲ್ಲಿ ಸಿನಿಮಾ ನೋಡಿ ಗೆಳೆಯನ ತಾಯಿಯನ್ನೇ ಅತ್ಯಾಚಾರಗೈದ ಪಾಪಿ...

ಪೋರ್ನ್ ಸೈಟ್ ಗಳಲ್ಲಿ ಸಿನಿಮಾ ನೋಡಿ ಗೆಳೆಯನ ತಾಯಿಯನ್ನೇ ಅತ್ಯಾಚಾರಗೈದ ಪಾಪಿ…

spot_img
- Advertisement -
- Advertisement -

ಜೈಪುರ: ಪೋರ್ನ್ ಸೈಟ್ ಗಳಲ್ಲಿ ಸೆಕ್ಸ್ ಮೂವಿಗಳನ್ನು ನೋಡಿ ಯುವಕನೊಬ್ಬ ಗೆಳೆಯನ ತಾಯಿಯನ್ನ ಅತ್ಯಾಚಾರಗೈದಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

21 ವರ್ಷದ ವಿಕಾಸ್ ಅಲಿಯಾಸ್ ನೇವಲಾ ಕಾಮುಕ ಯುವಕ. ಆನ್‍ಲೈನ್ ನಲ್ಲಿ ಸೆಕ್ಸ್ ಸಿನಿಮಾಗಳನ್ನು ನೋಡಿದ ವಿಕಾಸ್, ಮನೆಯಲ್ಲಿ ಒಂಟಿಯಾಗಿದ್ದ ಗೆಳೆಯನ 60 ವರ್ಷದ ವಿಧವೆ ತಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ವೇಳೆ ವಿಕಾಸ್ ಮದ್ಯ ಸೇವನೆ ಮಾಡಿದ್ದ ಎಂದು ತಿಳಿದು ಬಂದಿದೆ. ಅತ್ಯಾಚಾರದ ಬಳಿಕ ಮಹಿಳೆಯ ಮೇಲೆ ಹಲ್ಲೆಗೈದಿರುವ ವಿಕಾಸ್, ವಿಷಯ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದಾನೆ.

ಕೊನೆಗೆ ಮಹಿಳೆಯನ್ನ ಮನೆಯಲ್ಲಿ ಬಂಧಿಸಿ ಎಸ್ಕೇಪ್ ಆಗಿದ್ದಾನೆ. ಮಹಿಳೆ ಸಹಾಯಕ್ಕೆ ಕೂಗುತ್ತಿರುವ ಧ್ವನಿ ಕೇಳಿದ ನೆರೆಹೊರೆಯವರು ಬಾಗಿಲು ತೆರೆದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನ ಬರ್ಡೋಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಭಾನುವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದ್ದು, ಆರೋಪಿಯನ್ನ ಬಂಧಿಸಲಾಗಿದೆ. ಭಾನುವಾರ ಪೋರ್ನ್ ವೆಬ್‍ಸೈಟ್ ಗಳಲ್ಲಿ ಸಿನಿಮಾ ನೋಡಿದ್ದ ವಿಕಾಸ್, ಗೆಳೆಯನ ಮನೆಗೆ ತೆರಳಿದ್ದಾನೆ. ನಶೆಯಲ್ಲಿದ್ದ ವಿಕಾಸ್ ಗೆಳೆಯನ ತಾಯಿಯನ್ನ ಅತ್ಯಾಚಾರಗೈದು ಎಸ್ಕೇಪ್ ಆಗಿದ್ದನು. ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುನಿಲ್ ಜಂಗಿಡ್ ಹೇಳಿದ್ದಾರೆ. 

- Advertisement -
spot_img

Latest News

error: Content is protected !!