ಕೊಡಗು : ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಜೈಲಿನಲ್ಲಿದ್ದುಕೊಂಡೇ ಗೆಲುವು ಸಾಧಿಸಿದ್ದಾರೆ.
ಮಡಿಕೇರಿಯ ಪಾಲಿಬೆಟ್ಟ ಗ್ರಾಮ ಪಂಚಾಯ್ತಿ ಎಮ್ಮೆಗುಂಡಿ ಕ್ಷೇತ್ರದಲ್ಲಿ ಪುಲಿಯಂಡ ಬೋಪಣ್ಣ ಎಂಬುವರು ಜಾತಿ ನಿಂದನೆ ಪ್ರಕರಣದಲ್ಲಿ ದೂರು ದಾಖಲಾಗಿ, ಜೈಲು ಸೇರಿದ್ದರು. ಇವರು ಪಾಲಿಬೆಟ್ಟ ಗ್ರಾಮ ಪಂಚಾಯ್ತಿಗೆ ಅಭ್ಯರ್ಥಿಯಾಗಿ ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿದ್ದರು.
ಎರಡು ದಿನ ಜಾಮೀನಿನ ಮೇಲೆ ಹೊರ ಬಂದಿದ್ದಂತ ಬೋಪಣ್ಣ ಅವರು, ಪಾಲಿಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಕೂಡ ನಡೆಸಿದ್ದರು. ಇಂತಹ ಅಭ್ಯರ್ಥಿ ಇಂದು ನಡೆದಂತ ಚುನಾವಣಾ ಮತಏಣಿಕೆ ಸಂದರ್ಭದಲ್ಲಿ ಅಭ್ಯರ್ಥಿ ಯೂಸೂಪ್ ವಿರುದ್ಧ 61 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೈಲಿನಲ್ಲಿಯೇ ಇದ್ದುಕೊಂಡೇ ಬೋಪಣ್ಣ ಗೆಲುವಿನ ನಗೆಯನ್ನು ಬೀರಿದ್ದಾರೆ.
ಅಂದಹಾಗೇ ಈಗಾಗಲೇ 12 ವರ್ಷಗಳಿಂದ ಪಾಲಿಬೆಟ್ಟ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಆದ್ರೇ ಜಾತಿನಿಂದನೆ ಪ್ರಕರಣದಲ್ಲಿ ದೂರು ದಾಖಲಾಗಿ, ಜೈಲು ಸೇರಿದ್ದರು. ಇದೀಗ ಮತ್ತೆ ಗೆಲುವು ಸಾಧಿಸುವ ಮೂಲಕ, ಜೈಲಿನಲ್ಲಿದ್ದೇ ಗೆಲುವು ಸಾಧಿಸಿದ್ದಾರೆ.


