Friday, May 17, 2024
Homeತಾಜಾ ಸುದ್ದಿಹೀಗೊಂದು ಡಿಫರೆಂಟ್ ಬರ್ತಡೇ: ಹುಟ್ಟುಹಬ್ಬದ ದಿನ ನಾಯಿಗೆ ಸಿಕ್ತು 25 ಗ್ರಾಂನ ಚಿನ್ನದ ಸರ

ಹೀಗೊಂದು ಡಿಫರೆಂಟ್ ಬರ್ತಡೇ: ಹುಟ್ಟುಹಬ್ಬದ ದಿನ ನಾಯಿಗೆ ಸಿಕ್ತು 25 ಗ್ರಾಂನ ಚಿನ್ನದ ಸರ

spot_img
- Advertisement -
- Advertisement -

ವಿಜಯಪುರ:   ಮಾಲೀಕರು ನಾಯಿಯ ಬರ್ತಡೇ ಆಚರಿಸೋದನ್ನು ನೀವೆಲ್ಲಾ ನೋಡಿರ್ತೀರಾ. ಆದ್ರೆ ಇಲ್ಲಿ ಒಬ್ಬರು ನಾ. ಮಾಲೀಕರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನಾಯಿಗೆ ಅದ್ಧೂರಿ ಬರ್ತಡೇ ಮಾಡಿದ್ದು ಮಾತ್ರವಲ್ಲದೇ ಭರ್ಜರಿ ಗಿಫ್ಟ್ ಕೂಡ ಕೊಟ್ಟಿದ್ದಾರೆ.  

ಹೌದು.. ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಆಚರಣೆ ನಡೆದಿದ್ದು, ಇಲ್ಲಿನ ನಿವಾಸಿ ಸಂಗಯ್ಯ ರುದ್ರಯ್ಯ ಪತ್ರಿ ತಮ್ಮ ಸಾಕು ನಾಯಿಯ ಬರ್ತಡೆ ಆಚರಣೆ ಮಾಡಿ ಗಮನ ಸೆಳೆದಿದ್ದಾರೆ. ತಮ್ಮ ಮನೆಯ ಶ್ವಾನಕ್ಕೆ ಟೈಗರ್ ಎಂದು ಹೆಸರಿಟ್ಟಿರುವ ಕುಟುಂಬಸ್ಥರು ತಮ್ಮ ನಾಯಿಯ 3ನೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಬಾರಿ ಶ್ವಾನಕ್ಕೆ 25 ಗ್ರಾಂ ಚಿನ್ನದ ಸರ ಹಾಕಿದ ಕುಟುಂಬಸ್ಥರು ಕೇಕ್ ಕಟ್ ಮಾಡಿ ಬರ್ತಡೆ ಆಚರಣೆ ಮಾಡಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತಡೆ ಎಂದು T ಎಂದು ಅಚ್ಚು ಹಾಕಿಸಿರುವ ಚಿನ್ನದ ಚೈನ್ ಅನ್ನು ನಾಯಿಯ ಕೊರಳಿಗೆ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, 200ಕ್ಕೂ ಹೆಚ್ಚು ಜನರಿಗೆ ಆಹ್ವಾನ ನೀಡಿದ್ದ ಈ ಕುಟುಂಬಸ್ಥರು ನಾಯಿಯ ಬರ್ತಡೇಗೆ ಬಂದಿದ್ದ ಎಲ್ಲರಿಗೂ ಊಟ ಹಾಕಿಸಿ, ಆದರತೆ ಮೆರೆದಿದ್ದಾರೆ.

ಸಂಗಯ್ಯ ಪತ್ರಿ ಅವರಿಗೆ ಮೂರು ಜನ ಮಕ್ಕಳಿದ್ದಾರೆ. ಈ ನಾಯಿಯನ್ನು ಅವರು ತಮ್ಮ 4ನೇ ಮಗುವಿನಂತೆ ಸಾಕುತ್ತಿದ್ದಾರೆ. ಮಕ್ಕಳ ಜೊತೆಗೆ ಅದನ್ನು ಬೆಳೆಸುತ್ತಿದ್ದಾರೆ. 3 ವರ್ಷಗಳ ಹಿಂದೆ 15 ಸಾವಿರ ರೂ. ಖರ್ಚು ಮಾಡಿ ಗದಗದಿಂದ ಶ್ವಾನ ತಂದಿರುವ ಸಂಗಯ್ಯ ರುದ್ರಯ್ಯ ಪತ್ರಿ ಕುಟುಂಬಸ್ಥರಿಗೆ ಈ ನಾಯಿ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ. ಈ ಶ್ವಾನಕ್ಕೆ ಕಳೆದ ವರ್ಷವೂ ಅದ್ಧೂರಿಯಾಗಿ ಬರ್ತಡೆ ಮಾಡಿದ್ದ ಸಂಗಯ್ಯ ಪತ್ರಿ ಕುಟುಂಬ ಅಂದು 50 ಗ್ರಾಂ ಚಿನ್ನದ ಸರ ಹಾಕಿ, ಕೇಕ್ ಕಟ್ ಮಾಡಿ ಸಂಭ್ರಮಿಸಿತ್ತು. ಅಲ್ಲದೆ, 500 ಜನರಿಗೆ ಶಾವಿಗೆ ಪಾಯಸ, ಪೂರಿ, ಬಾಜಿ ಸೇರಿದಂತೆ ಥರಹೇವಾರಿ ಖಾದ್ಯಗಳ ಊಟ ಬಡಿಸಿತ್ತು. ಈ ಬಾರಿಯೂ ಅದ್ದೂರಿಯಾಗಿ ನಾಯಿಯ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಸಾಕು ಪ್ರಾಣಿಯ ಬಗ್ಗೆ ತಮಗಿರುವ ಪ್ರೀತಿಯನ್ನು ಹೊರ ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗಯ್ಯ ರುದ್ರಯ್ಯ ಪತ್ರಿ, ನಮ್ಮ ಮನೆಯಲ್ಲಿ 3 ಜನ ಮಕ್ಕಳಿದ್ದಾರೆ. ಅವರೊಂದಿಗೆ ಈ ಶ್ವಾನ ಕೂಡ ಕುಟುಂಬ ಸದಸ್ಯನಂತಿದೆ. ಈ ನಾಯಿಯೆಂದರೆ ಮನೆ ಮಂದಿಗೆಲ್ಲ ಅಚ್ಚುಮೆಚ್ಚು. ಅತೀಯಾದ ಪ್ರೀತಿ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಟೈಗರ್ ಬರ್ತಡೆ ಮಾಡುತ್ತಿದ್ದೇವೆ. ಈ ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಊಟ ಹಾಕಿಸುವ ಯೋಚನೆ ಇತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


- Advertisement -
spot_img

Latest News

error: Content is protected !!