- Advertisement -
- Advertisement -
ವಿಟ್ಲ: ಅವಿವಾಹಿತ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಪುಣಚದಲ್ಲಿ ನಡೆದಿದೆ.ಪುಣಚ ಅಜೇರುಮಜಲು ನಿವಾಸಿ ಬಾಲಕೃಷ್ಣ(39) ನಾಪತ್ತೆಯಾದವರು.
ಗಾರೆ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಒಂದು ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ಬೇರೆ ಕಡೆಯೂ ಕೈ ಸಾಲ ಮಾಡಿದ್ದರಂತೆ.ಕೆಲವು ದುಡ್ಡು ವಾಪಾಸ್ ಕೊಡುವಂತೆ ಒತ್ತಡ ಹೇರುತ್ತಿದ್ದರಂತೆ. ನಿನ್ನೆ ಕೆಲಸ್ಕಕೆ ಹೋಗದೇ ಮನೆಯಲ್ಲೇ ಇದ್ದು ಸಂಜೆ ವೇಳೆ ನಾನಿನ್ನು ಮನೆಗೆ ಬರುವುದಿಲ್ಲ ಎಂದು ಹೇಳಿ ಹೊರಗಡೆ ಹೋಗಿದ್ದರಂತೆ. ಹೀಗೆ ಹೋದವರು ವಾಪಾಸ್ ಬಂದಿಲ್ಲ ಎಂದು ಮನೆ ಮಂದಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಅವರ ಫೋನ್ ಕೂಡ ಸ್ವಿಚ್ಛ್ ಆಫ್ ಆಗಿದೆ ಎನ್ನಲಾಗಿದೆ.
- Advertisement -