Sunday, June 7, 2026
Homeಕರಾವಳಿವಿಟ್ಲದಲ್ಲಿ‌ ಮುಡ್ನೂರು ಗ್ರಾ.ಪಂ ಸದಸ್ಯನ  ಮೇಲೆ ಬೈಕ್‌ನಲ್ಲಿ‌ ಬಂದು ದುಷ್ಕರ್ಮಿಗಳಿಂದ ಹಲ್ಲೆ

ವಿಟ್ಲದಲ್ಲಿ‌ ಮುಡ್ನೂರು ಗ್ರಾ.ಪಂ ಸದಸ್ಯನ  ಮೇಲೆ ಬೈಕ್‌ನಲ್ಲಿ‌ ಬಂದು ದುಷ್ಕರ್ಮಿಗಳಿಂದ ಹಲ್ಲೆ

- Advertisement -
- Advertisement -

ವಿಟ್ಲ: ಗ್ರಾ.ಪಂ ಸದಸ್ಯನ  ಮೇಲೆ ಬೈಕ್‌ನಲ್ಲಿ‌ ಬಂದು ದುಷ್ಕರ್ಮಿಗಳಿಂದ ಹಲ್ಲೆ ಮಾಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ರಸ್ತೆಗೆ ಕಾಂಕ್ರೇಟ್ ಮಿಕ್ಸರ್ ಅಡ್ಡದಾಗಿ ನಿಲ್ಲಿಸಿದ್ದ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯರೋರ್ವರಿಗೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಕುಂಡಡ್ಕ ಗ್ರಾಮ ಪಂಚಾಯತ್ ಸದಸ್ಯ ಪುನೀತ್ ಮಾಡ್ತಾರ್ ಹಲ್ಲೆಗೊಳಗಾದವರು.

ಮಾಡತ್ತಡ್ಕ ರಸ್ತೆ ಕಾಮಗಾರಿಗಾಗಿ ಕಾಂಕ್ರೇಟ್ ಮಿಕ್ಸರ್ ರಸ್ತೆಗೆ ಅಡ್ಡದಾಗಿ ನಿಲ್ಲಿಸಿದ್ದು, ಈ ವೇಳೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಯಾಕೇ ಅಡ್ಡ ಕಾಂಕ್ರಿಟ್ ಮಿಕ್ಸರ್ ನಿಲ್ಲಿಸಿದ್ದು, ನಾವು ಹೇಗೆ ಹೋಗುವುದು..!??, ನಿಮಗೆ ರೋಡ್ ಬ್ಲಾಕ್ ಮಾಡಲು ಯಾರೂ ಅಧಿಕಾರ ಕೊಟ್ಟದ್ದು ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆಂದು ಪುನೀತ್ ಆರೋಪಿಸಿದ್ದಾರೆ.  ಪುನೀತ್ ರವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!