Wednesday, June 24, 2026
Homeತಾಜಾ ಸುದ್ದಿಮಂಗಳೂರು; ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆ

ಮಂಗಳೂರು; ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆ

- Advertisement -
- Advertisement -

ಮಂಗಳೂರು; ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಹಂಪನಕಟ್ಟೆಯಲ್ಲಿ ನಡೆದಿದೆ. ಗುಂಡ್ಲು ಪೇಟೆಯ ನಿವಾಸಿ ಮಹಾದೇವ ಸ್ವಾಮಿ ನಾಪತ್ತೆಯಾಗಿರುವ ವ್ಯಕ್ತಿ.

ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಾದೇವ ಸ್ವಾಮಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಕರಿಯಲ್ಲಿ ಮ್ಯಾನೇಜರ್ ಆಗಿ ರೋಹಿತ್ ಪೂಜಾರಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದು, ಈ ವೇಳೆ ಬೇಕರಿಯ ಹಣದ ವಹಿವಾಟವನ್ನು ಮಹಾದೇವ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಆದರೆ ನ.26ರಂದು ದಿನದ ವ್ಯವಹಾರದ ಹಣವನ್ನು ಮಹಾದೇವ ಸ್ವಾಮಿ ಬ್ಯಾಂಕ್‌ಗೆ ಜಮೆ ಮಾಡಿಲ್ಲ. ರಾತ್ರಿ ರೂಮಿಗೆ ತೆರಳಿದ್ದ ಆತ ಮರುದಿನ ಬೆಳಗ್ಗೆ ಸವಹರ್ತಿಗಳು ನೋಡಿದಾಗ ರೂಮಿನಿಂದ ನಾಪತ್ತೆಯಾಗಿದ್ದಾರೆ. ಅಲ್ಲದೆ ಮೊಬೈಲ್ ಕೂಡಾ ಬಿಟ್ಟು ಹೋಗಿದ್ದು, ಡೆತ್ ನೋಟ್ ಕೂಡ ಬರೆದಿದ್ದಾನೆ ಎನ್ನಲಾಗಿದೆ.
ನನ್ನನ್ನು ಹುಡುಕಬೇಡಿ, ನಾನು ಸಿಗುವುದಿಲ್ಲ, ಪ್ಲೀಸ್ ನನ್ನನ್ನು ಕ್ಷಮಿಸಿ, ಬದುಕಲು ಅರ್ಹನಲ್ಲ, ಸಾರಿ… ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!