ಕಡಬ : ಪೂಜೆಗೆಂದು ಬಂದಿದ್ದ ವಿದ್ಯಾರ್ಥಿನಿಯೊಬ್ಬಳ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆದಿದೆ.
ಸ್ಥಳೀಯ ಕಾಲೇಜು ವಿದ್ಯಾರ್ಥಿಯೊಬ್ಬಳು ದೀಪಾವಳಿ ಹಬ್ಬ ಪ್ರಯುಕ್ತ ತನ್ನ ಮನೆಗೆ ಬಂದಿದ್ದಳು. ನ.2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ಭಾಗವಹಿಸಿ ಮನೆಯವರ ಜೊತೆ ಭೋಜನಾ ಶಾಲೆಯತ್ತ ತೆರಳಿದ್ದಳು.
ಈ ಸಂದರ್ಭದಲ್ಲಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಟ ಮಾಡುತ್ತಿದ್ದ ಆರೋಪಿ ಶಿವರಾಮ ಭಟ್ ಎಂಬಾತ ಯುವತಿಯ ಎದೆ ಭಾಗಕ್ಕೆ ಕೈ ಹಾಕಿ ದೈಹಿಕ ಹಿಂಸೆ ನೀಡಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ ಪ್ರಶ್ನಿಸಿದಕ್ಕೆ ಆರೋಪಿ ಅವಾಚ್ಯ ಶಬ್ದ ಗಳಿಂದ ಬೈದಿರುವುದಾಗಿ ದೂರಲಾಗಿದೆ. ಈತ ಸುಬ್ರಹ್ಮಣ್ಯದಲ್ಲೇ ಜೆರಾಕ್ಸ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು ದೇಗುಲ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಸದ್ಯ ಯುವತಿ ನೀಡಿದ ದೂಪಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.