Friday, December 6, 2024
Homeಕರಾವಳಿಮಂಗಳೂರುಬೆಳ್ತಂಗಡಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಖುಲಾಸೆ

ಬೆಳ್ತಂಗಡಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ಖುಲಾಸೆ

spot_img
- Advertisement -
- Advertisement -

ಬೆಳ್ತಂಗಡಿ: ಕೈ ಸಾಲ ಮರುಪಾವತಿಗಾಗಿ ನೀಡಿರುವ ರೂಪಾಯಿ 6,75,000/- ಮೊತ್ತದ ಚೆಕ್ಕನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರುಪಡಿಸಿದಾಗ ಚೆಕ್ ಅಮಾನ್ಯಗೊಂಡಿರುವುದಾಗಿ ಆರೋಪಿಸಿ ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬೆಳ್ತಂಗಡಿಯ ಹಿಮಾಲಯ ಚಿಕನ್ ಅಂಡ್ ಕೋಲ್ಡ್ ಸ್ಟೋರೇಜ್ ಇದರ ಪರವಾಗಿ  ಉಪ್ಪಿನಂಗಡಿಯ  ಮಹಮ್ಮದ್ ರಿಯಾಜ್ ಎಂಬವರ ವಿರುದ್ಧ ದಾಖಲಿಸಿದ್ದ ಚೆಕ್ ಬೌನ್ಸ್ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆ ನಡೆಸಿರುವ ನ್ಯಾಯಾಧೀಶರಾದ ಮನು ಬಿಕೆ ರವರು ಆರೋಪಿ ಮೊಹಮ್ಮದ್ ರಿಯಾಜ್ ನಿರಪರಾಧಿ ಎಂಬುದಾಗಿ ತೀರ್ಪು ನೀಡಿರುತ್ತಾರೆ.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಹಮ್ಮದ್ ರಿಯಾಜ್ ನಾನು ದೂರುದಾರದೊಂದಿಗೆ ಯಾವುದೇ ಹಣಕಾಸು ವ್ಯವಹಾರ ನಡೆಸಿರುವುದಿಲ್ಲ ಮತ್ತು ಆತನಿಂದ ಯಾವುದೇ ಸಾಲವನ್ನು ಪಡೆದಿಲ್ಲ ಹಾಗೂ ಸಾಲ ಮರುಪಾವತಿಯ ಬಗ್ಗೆ ಯಾವುದೇ ಚೆಕ್ಕನ್ನು ನೀಡಿರುವುದಿಲ್ಲ ನನ್ನ ವಿರುದ್ಧ ಸುಳ್ಳು ದೂರನ್ನು ದಾಖಲಿಸಿರುವುದಾಗಿ ವಾದವನ್ನು ಮಂಡಿಸಿರುತ್ತಾರೆ.

ಆರೋಪಿಯ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ ನ ವಕೀಲರಾದ ನವಾಜ್ ಶರೀಫ್ ಎ, ಮಮ್ತಾಜ್ ಬೇಗಂ, ಇರ್ಷಾದ್, ಸಪ್ನಾಝ್ ವಾದ ಮಂಡಿಸಿದ್ದರು.

- Advertisement -
spot_img

Latest News

error: Content is protected !!