Saturday, August 29, 2026
Homeಕರಾವಳಿಉಡುಪಿಉಡುಪಿ: ಫ್ಲ್ಯಾಟ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಮನೆ ಮಂದಿ

ಉಡುಪಿ: ಫ್ಲ್ಯಾಟ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಮನೆ ಮಂದಿ

- Advertisement -
- Advertisement -

ಉಡುಪಿ: ಉಡುಪಿ ನಗರದ ಫ್ಲ್ಯಾಟ್‌ವೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿರುವ ಘಟನೆ ನಿನ್ನೆ ಸಂಜೆ ಸಂಭವಿಸಿದೆ.ಬಡಗುಪೇಟೆಯ ಆದಿತ್ಯ ಟವರ್‌ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯ ಫ್ಲ್ಯಾಟ್‌ನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಮನೆಯ ಗೋಡೆಗೆ ತೀವ್ರ ಹಾನಿಯಾಗಿದ್ದು, ಮನೆಯಲ್ಲಿದ್ದ ಎಂಟು ಜನರು ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.

ಸ್ಫೋಟದಿಂದ ಎರಡು ಮನೆಗಳಿಗೆ ಹಾನಿ ಉಂಟಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿ‌ ನಂದಿಸಿದ್ದಾರೆ.

- Advertisement -

Latest News

error: Content is protected !!