Friday, June 5, 2026
Homeಅಪರಾಧಅಪರಿಚಿತನ ಕರೆ ನಂಬಿ 12.15ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಅಪರಿಚಿತನ ಕರೆ ನಂಬಿ 12.15ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಮಂಗಳೂರು: ಅಪರಿಚಿತನೊಬ್ಬನ ಕರೆಯನ್ನ ನಂಬಿ ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಗಳಿಸುವ ಆಸೆಗೆ ವ್ಯಕ್ತಿಯೊಬ್ಬ 12,15,012 ರೂ. ಕಳೆದುಕೊಂಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಅಪರಿಚಿತ ಹುಡುಗಿಯೊಬ್ಬಳು ದೂರದಾರರಿಗೆ ಮಾ.30 ರಂದು ಕರೆ ಮಾಡಿ ಮನೆಯಲ್ಲೇ ಕುಳಿತು ದಿನಕ್ಕೆ 2-3 ಸಾವಿರ ರೂ. ಸಂಪಾದಿಸಬಹುದು ಎಂದಿದ್ದು, ಇದನ್ನ ನಂಬಿದ ವ್ಯಕ್ತಿ ಮೋಸ ಹೋಗಿದ್ದಾನೆ. ಆಕೆ ತನ್ನ ಹೆಸರು ಪ್ರೀತಿ ಶರ್ಮಾ ಎಂದು ಪರಿಚಯಿಸಿಕೊಂಡಿದ್ದು, ಡಾಟಾ ಕ್ಲಿಕ್‌ ಎಂಬ ಸಂಸ್ಥೆಯಿಂದ ಈ ಕೆಲಸವನ್ನು ಮಾಡುವುದಾಗಿ ಹಾಗೆಯೇ ಇದು ಯೂನೋ ಕಾಯಿನ್‌ ಟೆಕ್ನಾಲಜಿ ಎಂಬ ಸಂಸ್ಥೆಯ ಸಹ ಸಂಸ್ಥೆ ಎಂದು ಪರಿಚಯಿಸಿದ್ದಾಳೆ. ನಂತರದಲ್ಲಿ ಅವರ ಮೊಬೈಲ್‌ ಸಂಖ್ಯೆಯಲ್ಲಿ ಓಯಾಸಿಸ್‌ ಫೈನಾನ್ಸ್‌ ಅಫೀಶಿಯಲ್‌ 1 ಎನ್ನುವ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸಿಕೊಂಡಿದ್ದು, ನಂತರದಲ್ಲಿ ರಾಹುಲ್‌ ಎಂಬಾತ ಮೊದಲ ಹಂತದಲ್ಲಿ ಕೇವಲ ಸ್ಕ್ರೀನ್‌ ಶಾಟ್‌ ತೆಗೆದು ಕಳುಹಿಸಿದರೆ ಪ್ರತಿಯೊಂದಕ್ಕೆ 50 ರೂ. ನೀಡುವುದಾಗಿ ತಿಳಿಸಿದ್ದಾನೆ.

ದೂರುದಾರರು ವ್ಯಕ್ತಿ ತಿಳಿಸಿದಂತೆ 1,500 ರೂ.ವನ್ನು ಖಾತೆಗೆ ಜಮಾ ಮಾಡಿದ್ದು, ದೂರುದಾರರಿಗೆ ಟ್ರೇಡಿಂಗ್‌ ಮಾಡಿದರೆ ಶೇ.30ರಷ್ಟು ಲಾಭ ಸಿಗುತ್ತದೆ ಎಂದು ವ್ಯಕ್ತಿ ನಂಬಿಸಿದ್ದಾನೆ. ಅಪರಿಚಿತ ವ್ಯಕ್ತಿ ಹೇಳಿದಂತೆ ಎ.1ರಿಂದ 19ರ ವರೆಗೆ ಹಂತವಾಗಿ ಹಣವನ್ನು ದೂರುದಾರರು ವರ್ಗಾಯಿಸಿದ್ದಾರೆ. ಹಾಕಿದ ಹಣವು ಟ್ರೇಡಿಂಗ್‌ ಆಗಿ ಸುಮಾರು 13 ಲಕ್ಷ ರೂ. ತೋರಿಸಿದ್ದು, ಈ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಕ್ರೆಡಿಟ್‌ ಸ್ಕೋರ್‌ 100ಕ್ಕಿಂತ ಕಡಿಮೆ ಇದೆ ಅದಕ್ಕಾಗಿ 3.70 ಲಕ್ಷ ರೂ. ಹಣವನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ತಿಳಿಸಿದ್ದು, ನಂತರದಲ್ಲಿ ದೂರುದಾರರಿಗೆ ತಾವು ಮೋಸ ಹೋಗಿರುವುದಾಗಿ ತಿಳಿದಿದೆ ಎಂದು ದೂರಿದ್ದಾರೆ.

ಇನ್ನು ಘಟನೆಯ ಬಗ್ಗೆ ಸೈಬರ್‌ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದು, ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!