Thursday, June 4, 2026
Homeಅಪರಾಧಕೇರಳ: ಯುವತಿಯನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿ, ಬಳಿಕ ತಾನೂ ಬೆಂಕಿ ಹಚ್ಚಿಕೊಂಡ ಯುವಕ

ಕೇರಳ: ಯುವತಿಯನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿ, ಬಳಿಕ ತಾನೂ ಬೆಂಕಿ ಹಚ್ಚಿಕೊಂಡ ಯುವಕ

- Advertisement -
- Advertisement -

ಕೇರಳ: ಹುಟ್ಟು ಹಬ್ಬದ ಪಾರ್ಟಿ ಇದೆ ಯುವತಿಯೋರ್ವಳನ್ನು ಮನೆಗೆ ಕರೆತಂದ ಯುವಕ, ಆಕೆಗೆ ಬೆಂಕಿ ಹಚ್ಚಿ ತನ್ನ ಮೈಗೂ ಬೆಂಕಿ ಹಾಕಿಕೊಂಡ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸಂಭವಿಸಿದೆ.


ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಗ್ರಾಮದ 23 ವರ್ಷದ ಬಾಲಸುಬ್ರಮಣ್ಯಂ ಎಂಬಾತ ತನ್ನ ಹುಟ್ಟು ಹಬ್ಬದಂದು ಹುಡುಗಿಯೊಬ್ಬಳನ್ನು ಮನೆಗೆ ಕರೆದಿದ್ದಾನೆ. ಮನೆಗೆ ಬಂದ ಆಕೆಯನ್ನು ಕೋಣೆಗೆ ಕರೆದೊಯ್ದು ಬೆಂಕಿ ಹಚ್ಚಿದ್ದಾನೆ. ನಂತರ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ಯುವಕನ ತಾಯಿ ಹಾಗೂ ಕಿರಿಯ ಸಹೋದರ ಮನೆಯಲ್ಲಿದ್ದರು.
ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಬ್ಬರೂ ಮೃತಪಟ್ಟಿದ್ದಾರೆ.


ಮೃತರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇವರಿಬ್ಬರ ಪ್ರೇಮ ನಿವೇದನೆಯನ್ನು ಎರಡು ಮನೆಯವರು ಒಪ್ಪಿರಲಿಲ್ಲ. ಆ ಕಾರಣಕ್ಕೆ ಬಾಲಸುಬ್ರಮಣ್ಯಂ ಬಾಲಕಿಗೆ ಬೆಂಕಿ ಹಚ್ಚಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಮೃತಳ ತಾಯಿಯು ಬಾಲಕಿಯೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ.


- Advertisement -

Latest News

error: Content is protected !!