Thursday, June 4, 2026
Homeತಾಜಾ ಸುದ್ದಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಶ್ಮಿಪ್ರಭಾಕರ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಶ್ಮಿಪ್ರಭಾಕರ್

- Advertisement -
- Advertisement -

ಬೆಂಗಳೂರು: ಕನ್ನಡ ಕಿರುತೆರೆ ನಟಿ ರಶ್ಮಿಪ್ರಭಾಕರ್ ಗೆಳೆಯ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ ವಿವಾಹ ಸಮಾರಂಭ ನೆರವೇರಿತು.


ಕಿರುತೆರೆ ಅನೇಕ ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು.ರಶ್ಮಿ ಪ್ರಭಾಕರ್ ಪ್ರಸಿದ್ಧ ಲಕ್ಷ್ಮೀ ಬಾರಮ್ಮಧಾರವಾಹಿ ಸೇರಿದಂತೆ ಶುಭ ವಿವಾಹ, ಜೀವನ ಚೈತ್ರ, ಮಹಾಭಾರತ, ದರ್ಪಣ, ಮನಸೆಲ್ಲನೀನೇ ಹಾಗೂ ತೆಲುಗಿನಲ್ಲಿ ಪೌರ್ಣಿಮಿ, ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.


ಅವರ ಕೈ ಹಿಡಿದ ನಿಖಿಲ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.ಕಳೆದ ಮೂರು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಈಗ ಸತಿ ಪತಿಗಳಾಗಿದ್ದಾರೆ.

- Advertisement -

Latest News

error: Content is protected !!