ಮಂಗಳೂರು; ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ನಡೆದಿದೆ.ಮೃತರನ್ನು ಮಂಗಳೂರಿನ ಪಡೀಲು ವೀರನಗರ ನಿವಾಸಿ ಉದಯ್ ಕುಮಾರ್ (46) ಮೃತ ವ್ಯಕ್ತಿ.
ಉದಯ್ ಅವರು ಬುಧವಾರ ಮಧ್ಯಾಹ್ನ ಸೋಮೇಶ್ವರ ಸೋಮನಾಥ ಕ್ಷೇತ್ರದ ಮುಂದುಗಡೆ ತನ್ನ ಆಕ್ಟಿವಾ ಸ್ಕೂಟರನ್ನ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದಾರೆ.ರುದ್ರಪಾದೆಯಲ್ಲಿ ಪರ್ಸ್, ಚಪ್ಪಲ್, ಕೂಲಿಂಗ್ ಗ್ಲಾಸನ್ನ ಬಿಟ್ಟು ನಾಪತ್ತೆಯಾಗಿದ್ದರು. ಬೀಚಲ್ಲಿ ಸುತ್ತಾಡುತ್ತಿದ್ದ ಹುಡುಗನೋರ್ವನು ರುದ್ರಪಾದೆಯಲ್ಲಿದ್ದ ಪರ್ಸನ್ನು ಸ್ಥಳೀಯ ಗೂಡಂಗಡಿ ಮಾಲೀಕರಲ್ಲಿ ನೀಡಿದ್ದಾನೆ. ಗೂಡಂಗಡಿ ಮಾಲೀಕರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಅದರಂತೆ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರು ಉದಯ್ ಅವರನ್ನು ಹುಡುಕಿದ್ದಾರೆ. ಸಂಜೆ ವೇಳೆ ಸೋಮೇಶ್ವರ ಕಡಲ ಕಿನಾರೆಯ ಅಲಿಮಕಲ್ಲು ಎಂಬಲ್ಲಿ ಉದಯ್ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಶವವನ್ನ ಎಳೆದು ಮೇಲಕ್ಕೆ ಹಾಕಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.