- Advertisement -
- Advertisement -
ಮಂಗಳೂರು; ರಸ್ತೆ ಬದಿ ತಲೆ ತಿರುಗಿ ಬಿದ್ದಿದ್ದ ವ್ಯಕ್ತಿಯ ಮೇಲೆ ಕಾರು ಚಲಿಸಿದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರಿನ ರಾವ್ ಆಂಡ್ ರಾವ್ ಒಂದನೇ ಮೈದಾನ ಕ್ರಾಸ್ ರಸ್ತೆಯಲ್ಲಿ ನಡೆದಿದೆ.ಗೋಪಾಲ ಗಾಯಗೊಂಡವರು.
ಗೋಪಾಲ್ ತಲೆ ತಿರುಗಿ ರಸ್ತೆ ಬದಿಯಲ್ಲಿ ಬಿದ್ದರು.ಆಗ ಕಾರೊಂದು ಅವರ ಎದೆ ಮತ್ತು ಕೈಯ ಮೇಲೆ ಚಲಿಸಿದೆ. ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದಿದ್ದು ಅಪಘಾತ ಸಂಭವಿಸಿದ ಅನಂತರ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೋಪಾಲ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -