Wednesday, June 3, 2026
Homeಕರಾವಳಿಮಂಗಳೂರಿನಲ್ಲಿ ಹೀಗೊಬ್ಬ ಅಸ್ಸಾಮಿ; ತನ್ನ ಚಪ್ಪಲಿ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಯುವಕ

ಮಂಗಳೂರಿನಲ್ಲಿ ಹೀಗೊಬ್ಬ ಅಸ್ಸಾಮಿ; ತನ್ನ ಚಪ್ಪಲಿ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಯುವಕ

- Advertisement -
- Advertisement -

ಮಂಗಳೂರು;ಯುವಕನೊಬ್ಬ ತನ್ನ ಚಪ್ಪಲಿ ಕಾಣೆಯಾಗಿದೆ ಎಂದು 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿದ ಘಟನೆ ಮಂಗಳೂರಿನ ಶರವು ದೇವಸ್ಥಾನದ ಸಮೀಪ ನಡೆದಿದೆ.

ಶರವ ದೇವಸ್ಥಾನ0 ಸಭಾಂಗಣಕ್ಕೆ ಬಂದಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಅಲ್ಲಿರಲಿಲ್ಲ. ಹೀಗಾಗಿ 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ.ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು.ಹೀಗಾಗಿ ಕರ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಯುವಕ ಚಪ್ಪಲಿ ಕಳವಾಗಿರುವ ವಿಷಯ ಹೇಳಿದಾಗ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಗ ಸಭಾಂಗಣಕ್ಕೆ ಮಾರುಕಟ್ಟೆಯಿಂದ ಸಾಮಗ್ರಿ ಹಾಕಲು ಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಯುವಕನಲ್ಲಿ ಪೊಲೀಸರು ತಿಳಿಸಿದ್ದು, ಯುವಕ ದೂರು ನೀಡದೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!