Friday, June 5, 2026
Homeಕರಾವಳಿಬೆಳ್ತಂಗಡಿ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ‌ ಸಾವು

ಬೆಳ್ತಂಗಡಿ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ‌ ಸಾವು

- Advertisement -
- Advertisement -

ಬೆಳ್ತಂಗಡಿ : ನ್ಯಾಯತರ್ಪು ಗ್ರಾಮದ ಬದ್ಯಾರು ನಿವಾಸಿ, ಕೃಷಿ,ಕೂಲಿ ಕಾರ್ಮಿಕ ಕುಶಾಲಪ್ಪ ಗೌಡ (46) ರವರ ಮೃತದೇಹ ಜು.3 ರಂದು ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.

ಕೃಷಿ, ಕೂಲಿ ಕಾರ್ಮಿಕ ಮೃತ ಕುಶಾಲಪ್ಪ ಗೌಡ ಮನೆಯ ಸಮೀಪದ ಕೆರೆಯ ಪಕ್ಕದಲ್ಲಿ ನೀರಿನ ಚರಂಡಿಯಲ್ಲಿ ಬೆಳೆದಿರುವ ಹುಲ್ಲು ಕಸಕಡ್ಡಿ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರ ಬಹುದು ಎಂದು ಅನುಮಾನಿಸಲಾಗಿದೆ.
ಪಕ್ಕ ಮನೆಯವರು ತೋಟದ ಕೆಲಸಕ್ಕೆ ತೆರಳುವ ಸಮಯದಲ್ಲಿ ಇವರು ಮೃತಪಟ್ಟಿರುವುದನ್ನು  ನೋಡಿ ಮನೆಯವರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಗೆ ಮನೆಯವರು ದೂರು ನೀಡಿದ್ದಾರೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ,ಇಬ್ಬರು ಸಹೋದರರು ಓರ್ವ ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!