Saturday, May 18, 2024
Homeತಾಜಾ ಸುದ್ದಿನನ್ನಮ್ಮ ಸೂಪರ್​ ಸ್ಟಾರ್ ಸ್ಪರ್ಧಿ ಅಮೃತಾ ನಾಯ್ಡು ಬಾಳಲ್ಲಿ ಹೊಸ ಬೆಳಕು: ಸಮನ್ವಿಗೆ ಪುಟ್ಟ ತಮ್ಮನ ಆಗಮನ

ನನ್ನಮ್ಮ ಸೂಪರ್​ ಸ್ಟಾರ್ ಸ್ಪರ್ಧಿ ಅಮೃತಾ ನಾಯ್ಡು ಬಾಳಲ್ಲಿ ಹೊಸ ಬೆಳಕು: ಸಮನ್ವಿಗೆ ಪುಟ್ಟ ತಮ್ಮನ ಆಗಮನ

spot_img
- Advertisement -
- Advertisement -

ಬೆಂಗಳೂರು: ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಷೋ ಮೂಲಕ ಮನೆಮಾತಾಗಿದ್ದ ಪುಟಾಣಿ ಸಮನ್ವಿ ಜನವರಿ ತಿಂಗಳು ಬೆಂಗಳೂರಿನಲ್ಲಿ ನಡೆದ ಅಪಘಾತಕ್ಕೆ ಬಲಿಯಾಗಿದ್ದಳು. ಮೊದಲೇ ಒಂದು ಮಗುವನ್ನು ಕಳೆದುಕೊಂಡಿದ್ದ ಇವಳ ಅಮ್ಮ ಖ್ಯಾತ ನಿರೂಪಕಿ ಅಮೃತಾ ನಾಯ್ಡು ಹಾಗೂ ತಂದೆ ರೂಪೇಶ್​ ಬಾಳು ಅಕ್ಷರಶಃ ನಲುಗಿ ಹೋಗಿದ್ದ ದಿನವದು. ಆದರೆ ಇವತ್ತು ಆ ಮನೆಯಲ್ಲಿ ಮತ್ತೆ ಖುಷಿ ಮನೆಮಾಡಿದೆ. ಸಮನ್ವಿಗೆ ಪುಟ್ಟ ತಮ್ಮನ ಆಗಮನವಾಗಿದೆ.

ಸಮನ್ವಿ ಸಾಯುವ ಸಂದರ್ಭದಲ್ಲಿಯೇ ಗರ್ಭವತಿಯಾಗಿದ್ದ ಅಮೃತಾ ಅವರು ಇಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರ ಪತಿ ರೂಪೇಶ್​ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗಳ ಸಾವಿನ ಸಂದರ್ಭದಲ್ಲಿ ತಮಗೆ ಬೆಂಬಲಿಸಿದ, ಸಮಾಧಾನ ಹೇಳಿದವರಿಗೆ ಈ ಸಂದರ್ಭದಲ್ಲಿ ಅವರು ಧನ್ಯವಾದ ಸಲ್ಲಿಸಿದ್ದಾರೆ. ನನ್ನೊಳಗೆ ಒಂದು ಪುಟ್ಟ ಜೀವವಿದೆ, ನಾನು ಆ ಬೆಳಕನ್ನು ನೋಡುತ್ತೇನೆ ಎಂದು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅಮೃತಾ ಬರೆದುಕೊಂಡಿದ್ದರು.

- Advertisement -
spot_img

Latest News

error: Content is protected !!