Thursday, June 4, 2026
Homeಕರಾವಳಿವಿಟ್ಲ: ನಿರಂತರವಾಗಿ ಸುರಿಯುವ ಮಳೆಗೆ ಕುಸಿಯುವ ಭೀತಿಯಲ್ಲಿದೆ ಮನೆ

ವಿಟ್ಲ: ನಿರಂತರವಾಗಿ ಸುರಿಯುವ ಮಳೆಗೆ ಕುಸಿಯುವ ಭೀತಿಯಲ್ಲಿದೆ ಮನೆ

- Advertisement -
- Advertisement -

ವಿಟ್ಲ: ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ತೋಡಿನ ಬದಿಯಲ್ಲಿರುವ ಮನೆಯೊಂದು ಕುಸಿಯುವ ಭೀತಿಯಲ್ಲಿದೆ.   

ವಿಟ್ಲ ಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಪಿಲಿಂಜ ಅವರ ಮನೆಯ ಪಕ್ಕದಲ್ಲಿ ತೋಡು ಇದ್ದು, ಮಳೆಗೆ ಅದರ ಬದಿ ಕುಸಿದು ಬಿದ್ದಿದೆ. ಇದರಿಂದ ಮನೆಯೂ ಅಪಾಯದ ಅಂಚಿನಲ್ಲಿದ್ದು, ಈಗಾಗಲೇ ಮನೆಯ ಮಣ್ಣಿನ ಗೋಡೆ ಬಿರುಕು ಬಿಟ್ಟಿದೆ. ಈ ಮನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 15 ಮಂದಿ ವಾಸಿಸುತ್ತಿದ್ದು, ಆತಂಕದಲ್ಲಿದ್ದಾರೆ. ಸಂಬಂಧಪಟ್ಟವರಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

- Advertisement -

Latest News

error: Content is protected !!