Thursday, June 4, 2026
Homeಕರಾವಳಿವಿಟ್ಲ; ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು

ವಿಟ್ಲ; ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು

- Advertisement -
- Advertisement -

ವಿಟ್ಲ; ಮರ ಕಡಿಯಲೆಂದು ಮರವೇರಿದ್ದ ಯುವಕನೊಬ್ಬ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಕಂಬಳಬೆಟ್ಟು‌ ಕೊಳಂಬೆ ನಿವಾಸಿ ಯುವಕ‌ ನಾಸೀರ್ (19) ‌ಮೃತ ಯುವಕ. ಈತ ಕೆಲಸ ಮಾಡುವಾಗ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ತಕ್ಷಣ ಮಂಗಳೂರಿನ‌ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆಟೋ ಚಾಲಕನಾಗಿದ್ದ  ನಾಸೀರ್ ಇತ್ತೀಚಿನ ಕೆಲದಿನಗಳಿಂದ ಮರದ ಕೆಲಸಕ್ಕೆ ತೆರಳುತ್ತಿದ್ದ.

- Advertisement -

Latest News

error: Content is protected !!