Friday, June 5, 2026
Homeಕರಾವಳಿಉಡುಪಿತೆಕ್ಕಟ್ಟೆ: ಮಳೆಗೆ ಕುಸಿದು ಬಿದ್ದ ಮನೆಯ ಮೇಲ್ಛಾವಣಿ: ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಗೆ ಗಂಭೀರ ಗಾಯ

ತೆಕ್ಕಟ್ಟೆ: ಮಳೆಗೆ ಕುಸಿದು ಬಿದ್ದ ಮನೆಯ ಮೇಲ್ಛಾವಣಿ: ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಗೆ ಗಂಭೀರ ಗಾಯ

- Advertisement -
- Advertisement -

ತೆಕ್ಕಟ್ಟೆ : ಮಳೆಯಿಂದಾಗಿ ಕುಂಭಾಶಿ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರದ ಗಣೇಶ್ ಕೊರಗ ಅವರ ಮನೆಯ ಮೇಲ್ಬಾವಣಿ ಗುರುವಾರ ಕುಸಿದುಬಿದ್ದಿದೆ. ಕೋಣೆಯಲ್ಲಿ ಮಲಗಿದ್ದ ಗಣೇಶ್ ಕೊರಗ ಅವರ ಮೈಮೇಲೆ ಮರದ ಪಕ್ಕಾಸು ಹಾಗೂ ಹೆಂಚುಗಳು ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದೆ.

ಸುಮಾರು 3ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಸ್ಥಳಕ್ಕೆ ಕುಂಭಾಶಿ ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಎಸ್.ಆರ್., ಪಿಡಿಒ ಜಯರಾಮ ಶೆಟ್ಟಿ, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ವಿ., ಗ್ರಾ.ಪಂ. ಸದಸ್ಯರಾದ ಸುನಿಲ್, ಗ್ರಾಮಕರಣಿಕ ನಾಗರಾಜ್ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!