Saturday, June 6, 2026
Homeಕರಾವಳಿವಿಟ್ಲದಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ವಿಟ್ಲದಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ: ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ವಿಟ್ಲ ಪೇಟೆಯಲ್ಲಿ ನಡೆದಿದೆ. ವಿಟ್ಲ ಕಾಸರಗೋಡು ಮುಖ್ಯ ರಸ್ತೆಯ ನಾಲ್ಕು ಮಾರ್ಗ ಜಂಕ್ಷನ್ ಬಳಿ ಚರಂಡಿಗೆ ಕವುಚಿ ಬಿದ್ದ ವ್ಯಕ್ತಿ ಚಂದಳಿಕೆ ನಿವಾಸಿ ಪಕ್ರು ಸಾವನ್ನಪ್ಪಿದ್ದಾರೆ.  ಮುಖ ಚರಂಡಿಯ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಅವರ ಪತ್ತೆಯಾಗಿದ್ದಾರೆ.

ರಸ್ತೆಯ ಫುಟ್ ಪಾತ್ ನ ಸ್ಲಾಬ್ ತೆರೆದ ಸ್ಥಿತಿಯಲ್ಲಿದ್ದು, ಕುಡಿದ ಮತ್ತಿನಲ್ಲಿ ಅದಕ್ಕೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!