Saturday, June 6, 2026
Homeಕರಾವಳಿಉಡುಪಿಉಡುಪಿ; ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆತ್ತಲು ಬಾವಿಗೆ ಇಳಿದ ವ್ಯಕ್ತಿ ಸಾವು

ಉಡುಪಿ; ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆತ್ತಲು ಬಾವಿಗೆ ಇಳಿದ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ: ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆತ್ತಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ವಿದ್ಯಾರತ್ನ ನಗರ ಎಂಬಲ್ಲಿ ನಡೆದಿದೆ.ಮಂಗಳೂರು ಮೂಡುಶೆಡ್ಡೆ ಶಿವ ನಗರದ ಸ್ವಾಮಿನಾಥ್ (54) ಮೃತ ದುರ್ದೈವಿ.

ಇವರು ಭವಾನಿ ಶಂಕರ ರಾವ್ ಎಂಬವರ ಬಾವಿಗೆ ಬಿದ್ದ ಬೆಕ್ಕನ್ನು ತೆಗೆಯಲು ಬಾವಿಗೆ ಇಳಿದಿದ್ದು, ಅಲ್ಲಿಂದ ಬೆಕ್ಕನ್ನು ಮೇಲಕ್ಕೆ ಕೊಟ್ಟು ಬಳಿಕ ಹಗ್ಗದ ಸಹಾಯದಿಂದ ಬಾವಿಯಿಂದ ಮೇಲಕ್ಕೆ ಬರುವಾಗ ಆಕಸ್ಮಿಕವಾಗಿ ಕೈತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!