Friday, June 5, 2026
Homeಕರಾವಳಿಮಂಗಳೂರುಪುತ್ತೂರು; ಕೆರೆಯಲ್ಲಿ ಈಜಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಪುತ್ತೂರು; ಕೆರೆಯಲ್ಲಿ ಈಜಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಪುತ್ತೂರು; ಕೆರೆಯಲ್ಲಿ ಈಜಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿಯ ಪಟ್ಟೆಯಲ್ಲಿ ನಡೆದಿದೆ. ಕಡಬ ಕರ್ಮಾಯಿ ನಿವಾಸಿ ಕಿರಣ್ ರೈ (40) ಮೃತ ದುರ್ದೈವಿ.

ಕಿರಣ್  ರೈ ತಿಂಗಳಾಡಿಯ ಪಟ್ಟೆಯ ಸಂಜೀವ ರೈ ಎಂಬವರ ಪುತ್ರಿಯನ್ನು  ವಿವಾಹವಾಗಿದ್ದು ಪ್ರಸ್ತುತ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮಾ.11ರಂದು ಸಂಜೆ ತೋಟದ ಕೆರೆಗೆ ನೀರು ತರಲೆಂದು ಪತ್ನಿ ಜೊತೆ ತೆರಳಿದ್ದು, ಆ ಬಳಿಕ ನಾನು ಕೆರೆಯಲ್ಲಿ ಈಜಾಡುತ್ತೇನೆ ಎಂದು ಹೇಳಿ ಕೆರೆಗೆ ಇಳಿದವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಿರಣ್ ರೈಯವರ ಸ್ವಂತ ಮನೆ ಕಡಬದ ಕರ್ಮಾಯಿಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!