Friday, June 5, 2026
Homeಕರಾವಳಿಉಡುಪಿಉಡುಪಿ; ಫ್ರಿಡ್ಜ್ ರಿಪೇರಿ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

ಉಡುಪಿ; ಫ್ರಿಡ್ಜ್ ರಿಪೇರಿ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ; ಫ್ರಿಡ್ಜ್ ರಿಪೇರಿ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ನಡೆದಿದೆ.76 ಬಡಗಬೆಟ್ಟುವಿನ ಬೈಲೂರು ಬಿ.ಬಿ.ನಗರ ನಿವಾಸಿ ಗಿರೀಶ್ ಶೇರಿಗಾರ್(45) ಮೃತ ವ್ಯಕ್ತಿ.

ಗಿರೀಶ್ ಅವರು ಸುಮಾರು 25 ವರ್ಷ ಗಳಿಂದ ಎಲೆಕ್ಟ್ರಿಷಿಯನ್ ಹಾಗೂ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿ ದ್ದರು. ಮಥುರಾ ಕಂಫರ್ಟ್ಸ್ ಹೋಟೆಲ್‌ಗೆ ರೆಫ್ರಿಜರೇಟರ್ ಪರಿಶೀಲನೆ ಮಾಡಲು ಬಂದಿದ್ದ ಇವರು, ರೆಫ್ರಿಜರೇಟರ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!