ಬಂಟ್ವಾಳ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಮೆಲ್ಕಾರ್ – ಮುಡಿಪು ರಾಜ್ಯ ಹೆದ್ದಾರಿಯ ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ನಡೆದಿದೆ.ಬರಿಮಾರು ನಿವಾಸಿ ಸರ್ಫ್ರಾಝ್( 33) ಮೃತಪಟ್ಟ ಯುವಕ. ಸಹ ಸವಾರೆ ಸರ್ಫ್ರಾಝ್ ಸಹೋದರಿ ಜಾಸ್ಮೀನ್ (18) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಫ್ರಾಝ್ ತನ್ನ ತಂಗಿ ಜಾಸ್ಮೀನ್ ರನ್ನು ಬುಧವಾರ ಬೆಳಗ್ಗೆ ದೇರಳಕಟ್ಟೆಯ ಕಾಲೇಜಿಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.ಮೆಲ್ಕಾರ್ ನಿಂದ ಮುಡಿಪು ಮಾರ್ಗವಾಗಿ ಮಾರ್ನಬೈಲು ತಲುಪಿದಾಗ ಇವರ ಸ್ಕೂಟರ್ ಗೆ ಎದುರಿನಿಂದ ಇಮ್ತಿಯಾಝ್ ಎಂಬಾತ ಚಲಾಯಿಸಿಕೊಂಡು ಬಂದ ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಕೂಟರ್ ನಲ್ಲಿದ್ದ ರಸ್ತೆಗೆ ಎಸೆಯಲ್ಪಟ್ಟಿದ್ದರು.
ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸರ್ಫ್ರಾಝ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.