- Advertisement -
- Advertisement -
ಸುಳ್ಯ; ಮಲಗಿದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಾಳುಗೋಡಿನ ಕಿರಿಭಾಗದಲ್ಲಿ ನಡೆದಿದೆ. ಕಿರಿಭಾಗದ ದಿ| ಸೀತಾರಾಮ ಗೌಡ ಎಂಬವರ ಮಗ ಪವಿತ್ ಕಿರಿಭಾಗ(35) ಮೃತದುರ್ದೈವಿ.
ಪವಿತ್ ಹಾಗೂ ಅವರ ಅಮ್ಮ ಇಬ್ಬರೇ ಮನೆಯಲ್ಲಿ ವಾಸವಿದ್ದು ಅವರ ತಾಯಿ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಪವಿತ್ ಒಬ್ಬರೇ ಮನೆಯಲ್ಲಿದ್ದರು. ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಪವಿತ್ ಕುಡಿದು ಮಲಗಿದವರು ಅಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನು ಪವಿತ್ ಎರಡು ದಿನಗಳ ಹಿಂದೆ ಮರಣ ಹೊಂದಿರುವ ಅನುಮಾನ ವ್ಯಕ್ತವಾಗಿದ್ದು ಪವಿತ್ ಮೃತ ದೇಹ ಊದಿಹೋಗಿದ್ದು ಕೊಳೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.
- Advertisement -