Friday, June 5, 2026
Homeಕರಾವಳಿಮಂಗಳೂರು; ಬೀಚ್ ನೋಡಲು ಬಂದ ವ್ಯಕ್ತಿ ನೀರುಪಾಲು

ಮಂಗಳೂರು; ಬೀಚ್ ನೋಡಲು ಬಂದ ವ್ಯಕ್ತಿ ನೀರುಪಾಲು

- Advertisement -
- Advertisement -

ಮಂಗಳೂರು; ವ್ಯಕ್ತಿಯೊಬ್ಬರು ಸಮುದ್ರ ಪಾಲಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬೀಚ್ ನಲ್ಲಿ ನಡೆದಿದೆ. ಮಳಲಿ ನಿವಾಸಿ ಖಾಲಿದ್ (51) ಮೃತ ವ್ಯಕ್ತಿ.

ಮಳಲಿ ನಿವಾಸಿ ಖಾಲಿದ್ ಅವರು ತನ್ನ ಪತ್ನಿ, ಮಕ್ಕಳ ಜೊತೆ ಉಳ್ಳಾಲ ಝಿಯಾರತ್ ಗೆಂದು ಬಂದಿದ್ದರು.ಝಿಯಾರತ್ ಮುಗಿಸಿದ ಬಳಿಕ ಉಳ್ಳಾಲ ಬೀಚ್ ಗೆ ತೆರಳಿದ್ದರು. ಈ ವೇಳೆ ಸಮುದ್ರದ ಅಲೆಗೆ ತಂದೆ ಮಗ ಸಮುದ್ರ ಪಾಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಈಜುಗಾರರು ಮಗುವನ್ನು ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಲಿದ್ ರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಆ ವೇಳೆಗೆ ಸಮುದ್ರ ಪಾಲಾಗಿದ್ದಾರೆ.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹ ಉಳ್ಳಾಲ ಬೀಚ್ ಬಳಿ ಸಂಜೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!